ಬಂಧನ (ಸಾಂದರ್ಭಿಕ ಚಿತ್ರ)
ಜೇವರ್ಗಿ: ಮೋಟರ್ ಪಂಪ್‌ಸೆಟ್ ಕಳವು ಮಾಡಿ ಹೊಲದಲ್ಲಿ ಹೂತಿಟ್ಟ ಘಟನೆ ಜೇವರ್ಗಿ ತಾಲ್ಲೂಕಿನ ನೆಲೋಗಿ ಪೊಲೀಸ್ ಠಾಣೆ ವ್ಯಾಪ್ತಿಯ ನೀರಲಕೋಡ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಮರೆಪ್ಪ ಹಡಪದ ಎಂಬುವರ ತೋಟದಲ್ಲಿರುವ ಮೋಟರ್ ಕಳೆದ ಶನಿವಾರ ಕಳವಾಗಿತ್ತು. ಪಂಪ್‌ಸೆಟ್ ದ್ವಿ ಚಕ್ರ ವಾಹನದ ಮೂಲಕ ನೀರಲಕೋಡ ಗ್ರಾಮದ ನಾಗರಾಜ ಹಡಪದ ಎನ್ನುವವರು ಕದ್ದೊಯ್ದು ತನ್ನ ಹೊಲದಲ್ಲಿ ಹೂತಿಟ್ಟಿದ್ದ ಎನ್ನಲಾಗಿದೆ. ಹೊಲದಲ್ಲಿ ಬೈಕ್ ಓಡಾಡಿದ್ದ ಸುಳಿವು ಮೇಲೆ ಅನುಮಾನಗೊಂಡ ಮರೆಪ್ಪ ನಾಗರಾಜನ ಹೊಲದಲ್ಲಿ ಅಗೆದು ನೋಡಿದಾಗ ಪಂಪ್‌ಸೆಟ್ ದೊರಕಿದೆ.
ಮರೆಪ್ಪ ಹಡಪದ ಅವರ ಸಹೋದರನ ಮಗನಾದ ನಾಗರಾಜ ಅವರನ್ನು ಪೊಲಿಸರು ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ಕುರಿತು ನೆಲೋಗಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪ್ರಕರಣ ದಾಖಲಾಗಿಲ್ಲ.
‘ನೀರಲಕೋಡ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹತ್ತಾರು ರೈತರ ಪಂಪ್‌ಸೆಟ್‌ಗಳನ್ನು ಕಳವು ಮಾಡಲಾಗಿದೆ. ಪೊಲೀಸರು ಸರಿಯಾದ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ, ಕಠಿಣ ಶಿಕ್ಷೆಗೆ ಒಳಪಡಿಸಬೇಕು’ ಎಂದು ನಮ್ಮ ಕರ್ನಾಟಕ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಸುಧೀಂದ್ರ ಇಜೇರಿ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.