ಕಲಬುರಗಿ: ‘ಜಂಕ್ ಫುಡ್ ಸೇವನೆಯಿಂದ ಮನುಷ್ಯನ ದೇಹದ ರೋಗ ನಿರೋಧಕ ಶಕ್ತಿ ಕ್ಷೀಣಿಸುತ್ತದೆ. ನಮ್ಮ ಅಡುಗೆ ಮನೆಯೇ ಔಷಧಾಲಯವಿದ್ದಂತೆ. ಹೆಚ್ಚೆಚ್ಚು ಸೊಪ್ಪು–ತರಕಾರಿ ಹಣ್ಣುಗಳನ್ನು ಸೇವಿಸಬೇಕು’ ಎಂದು ವೈದ್ಯ ಡಾ.ಸುರೇಂದ್ರ ಸಿದ್ದಾಪುರಕರ್ ಸಲಹೆ ನೀಡಿದರು.
ಕರುಣೇಶ್ವರ ನಗರದ ಜೈವೀರ ಹನುಮಾನ ಮಂದಿರದಲ್ಲಿ ಜೈ ವೀರ ಹನುಮಾನ ದೇವಸ್ಥಾನದ ರಜತ ಮಹೋತ್ಸವ ಹಾಗೂ ವಿಶ್ವ ಹೋಮಿಯೋಪಥಿ ದಿನದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
‘ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಮಾಜಿಕ ಮತ್ತು ಆರೋಗ್ಯ ಶಿಬಿರ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ವೈದ್ಯರು ಹತ್ತರಲ್ಲಿ ಇಬ್ಬರು ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಿದರೆ ಬಡವರಿಗೆ ಅನುಕೂಲವಾಗುತ್ತದೆ. ವೈದ್ಯರು ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಸಮಾಜದಲ್ಲಿ ಪೂರಕ ಬದಲಾವಣೆ ಕಾಣಬಹುದು ಎಂದರು.
ದೇವಸ್ಥಾನದ ಅಧ್ಯಕ್ಷ ಕಿಶನರಾವ್ ಮಟಮಾರಿ, ಅವಿನಾಶ್ ಕುಲಕರ್ಣಿ ರೇವೂರ, ಕೃಷ್ಣಮೂರ್ತಿ, ವಿನುತ ಜೋಶಿ, ವಿಶ್ವಾಸ್ ಮೊಘೇಕರ್, ರಾಘವೇಂದ್ರ ಕುಲಕರ್ಣಿ, ನಿರಂಜನ್ ಮಾಹೂರಕರ್, ಅಭಿಜಿತ್ ಸಿದ್ದಾಪುರಕರ್, ನಿತೀಶ್ ಜೋಶಿ, ಶಂಕರರಾವ್ ಸಿಂದಗಿಕರ್, ವಿನೋದ್ ಸಾತಖೇಡ್, ಸಂಜು ಬಿರಾದಾರ, ದತ್ತಾತ್ರೇಯ ಸಬ್ನವಿಸ್, ಗೌರೀಶ್ರೀ ಆತ್ಮಕೂರ್, ಕಿಶನರಾವ್ ಕುಲಕರ್ಣಿ, ಹೇಮಾ ಚೌಡಾಪುರಕರ್, ಗಿರಿಜಾ ಸಿಂದಗಿಕರ, ಸುನಂದಾ ಜೋಶಿ, ಶ್ರುತಿ, ವಿದ್ಯಾ, ಸುಬ್ರಹ್ಮಣ್ಯ, ಅಪರ್ಣಾ, ನಿಖಿತಾ, ಸೃಷ್ಟಿ, ಗೌರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.