ADVERTISEMENT

Video | ಕುಷ್ಠರೋಗಿಗಳ ಸೇವೆಗೆ ಬದುಕನ್ನೇ ಮುಡಿಪಿಟ್ಟ ದಂಪತಿ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2024, 5:11 IST
Last Updated 28 ಡಿಸೆಂಬರ್ 2024, 5:11 IST

‘ನೀನು ನಿನ್ನ ತಾಯಿಯ ಸೇವೆ ಮಾಡಿದಂತೆ ನಮ್ಮನ್ನು ನಮ್ಮ ಮಕ್ಕಳು ನೋಡಿಕೊಳ್ಳಲಪ್ಪ’ ಎಂದು ಕುಷ್ಠರೋಗಿಗಳು ಅಳಲು ತೋಡಿಕೊಂಡಾಗ ಅವರ ಸೇವೆಗೆ ನಿಂತವರು ಕಲಬುರಗಿಯ ಹನಮಂತ ದೇವನೂರ. ಅವರ ಈ ಕೆಲಸಕ್ಕೆ ಕೈಜೋಡಿಸಿದವರು ಅವರ ಪತ್ನಿ ಬಸಮ್ಮ ದೇವನೂರ. ಹನುಮಂತ ಅವರ ತಾಯಿ ಮತ್ತು ಬಸಮ್ಮ ಅವರ ತಂದೆ–ತಾಯಿ ಕುಷ್ಠರೋಗಿಗಳಾಗಿ ನೋವು ಅನುಭವಿಸಿದ್ದನ್ನು ಕಣ್ಣಾರೆ ಕಂಡಿದ್ದ ಈ ದಂಪತಿ, ಈಗ ಇತರೆ ಕುಷ್ಠರೋಗಿಗಳ ಸೇವೆಗೇ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ‘ನಮ್ಮಮ್ಮ ಕುಷ್ಠರೋಗಿಯಾಗಿ ಬೀದಿ ಬದಿ ಭಿಕ್ಷೆ ಬೇಡಿ ನಮ್ಮನ್ನು ಸಾಕುವ ಸಂದರ್ಭದಲ್ಲಿ, ಅವರ ಕಷ್ಟ ನೋಡಿ ನಮಗೆ ಆಶ್ರಯ ನೀಡಿದವರು ಇಲ್ಲಿನ ಜನ. ಈಗ ಅವರ ಋಣ ತೀರಿಸುವ ಸಮಯ ಬಂದಿದೆ’ ಎನ್ನುವ ಈ ದಂಪತಿಯ ಸ್ಫೂರ್ತಿದಾಯಕ ಕಥನವೇ ಈ ವಿಡಿಯೊ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.