ADVERTISEMENT

ಕಲಬುರಗಿ: 35 ಬಗೆಯ ಪಕ್ಷಿಗಳ ಗುರುತು

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 5:52 IST
Last Updated 17 ಫೆಬ್ರುವರಿ 2026, 5:52 IST
ಆಸಕ್ತರಲ್ಲಿ ಪಕ್ಷಿಗಳ ನಡವಳಿಕೆ ಹಾಗೂ ಅವುಗಳ ವೈಶಿಷ್ಟ್ಯ ಪರಿಚಯಿಸುವ ಉದ್ದೇಶದಿಂದ ಕಲಬುರಗಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪಕ್ಷಿ ವೀಕ್ಷಣೆ ಕಾರ್ಯಕ್ರಮದಲ್ಲಿ ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ಗ್ರೀನ್‌ಬೀ ಈಟರ್‌ ಪಕ್ಷಿಗಳು
ಆಸಕ್ತರಲ್ಲಿ ಪಕ್ಷಿಗಳ ನಡವಳಿಕೆ ಹಾಗೂ ಅವುಗಳ ವೈಶಿಷ್ಟ್ಯ ಪರಿಚಯಿಸುವ ಉದ್ದೇಶದಿಂದ ಕಲಬುರಗಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪಕ್ಷಿ ವೀಕ್ಷಣೆ ಕಾರ್ಯಕ್ರಮದಲ್ಲಿ ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ಗ್ರೀನ್‌ಬೀ ಈಟರ್‌ ಪಕ್ಷಿಗಳು   

ಕಲಬುರಗಿ: ಆಸಕ್ತರಲ್ಲಿ ಪಕ್ಷಿಗಳ ನಡವಳಿಕೆ, ವೈಶಿಷ್ಟ್ಯ ಪರಿಚಯಿಸುವ ಉದ್ದೇಶದಿಂದ ನಗರದಲ್ಲಿ ಇದೇ ಮೊದಲ ಬಾರಿಗೆ ‘ಆಸಕ್ತ ಅಧ್ಯಯನಕಾರರ ಗ್ರೇಟ್‌ ಬ್ಯಾಕ್‌ ಯಾರ್ಡ್‌ ಬರ್ಡ್‌ ಕೌಂಟ್‌’ ಕಾರ್ಯಕ್ರಮ ನಡೆಯಿತು.

ಬುದ್ಧ ವಿಹಾರ ಮತ್ತು ಗುಲಬರ್ಗಾ ವಿವಿ ಕ್ಯಾಂಪಸ್‌ನಲ್ಲಿ ಬೆಳಿಗ್ಗೆ 6.30ರಿಂದ 9.30ರವರೆಗೆ ತಂಡವು ಪಕ್ಷಿ ವೀಕ್ಷಣೆಯಲ್ಲಿ ತೊಡಗಿತ್ತು. ಈ ಅವಧಿಯಲ್ಲಿ ಒಟ್ಟು ಇದರಲ್ಲಿ 35ಕ್ಕೂ ಹೆಚ್ಚು ವಿವಿಧ ಜಾತಿಯ ಪಕ್ಷಿಗಳನ್ನು ಗುರುತಿಸಲಾಯಿತು.

ಇದರಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಮತ್ತು ಪಕ್ಷಿ ಪ್ರೇಮಿಗಳು ಭಾಗಿಯಾಗಿದ್ದರು. ಪಕ್ಷಿಗಳ ವಿಶೇಷ ಭಂಗಿಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಯಿತು. ವಿಶೇಷವಾಗಿ ಕಾಪರ್ ಸ್ಮಿತ್ ಬಾರ್ಬೆಟ್ (ಕಂಚುಕುಟಿಕ) ಮರದಲ್ಲಿ ಹೊಳ್ಳೆ ಮಾಡುವ ಬಗೆ, ಮರಿಗಳ ಜೊತೆ ಪಕ್ಷಿ, ಮತ್ತು ವಿವಿಧ ಬಗೆಯ ಪಕ್ಷಿಗಳ ನಡವಳಿಕೆ ಬಗೆಗೆ ವಿದ್ಯಾರ್ಥಿಗಳಿಗೆ ವಿವರಿಸಲಾಯಿತು.

ADVERTISEMENT

ಪಕ್ಷಿ ಅಧ್ಯಯನಕಾರ ತಂಡದ ಕೆ.ಎಸ್.ಐಶ್ವರ್ಯ, ಅಭಿಷೇಕ್ ಉಪ್ಪಾರ, ಪವನ್ ಮೋಹನ್‌ರಾವ್, ಡಾ.ರಾಜಶೇಖರ, ಡಾ.ಅನಿಲ್ ಹಾಗೂ ಮಹೇಶ್ ಹಲವು ಪಕ್ಷಿಗಳ ಬಗೆಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಪ್ರಮುಖವಾಗಿ ಗ್ರೇ ನೆಕ್ಡ್ ಬಂಟಿಂಗ್, ರೋಸಿ ಸ್ಟಾರ್ಲಿಂಗ್, ಇಂಡಿಯನ್ ಸ್ಪಾಟ್ ಬಿಲ್ಡ್ ಡಕ್, ಕಾಮನ್ ಮೋರ್ಹೆನ್, ಕಾರ್ಮೋರೆಂಟ್, ಇಂಡಿಯನ್ ಗ್ರೇಹಾರ್ನ್ ಬಿಲ್, ಗೋಲ್ಡನ್ ಓರಿಯಲ್, ಏಷಿಯನ್ ಟಿಟ್ ಇತ್ಯಾದಿ 35ಕ್ಕೂ ಹೆಚ್ಚು ಬಗೆಯ ಪಕ್ಷಿಗಳ ದಾಖಲಾತಿ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.