ADVERTISEMENT

ಕಾಳಗಿ | ಜೀಪ್–ಕಾರು ಡಿಕ್ಕಿ: ಒಬ್ಬ ಸಾವು, ಆರು ಮಂದಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 6:30 IST
Last Updated 13 ಡಿಸೆಂಬರ್ 2025, 6:30 IST
<div class="paragraphs"><p>ಅಪಘಾತದಲ್ಲಿ ಕಾರು ಹಾಗೂ ಜೀಪ್‌ ನಜ್ಜುಗುಜ್ಜಾಗಿರುವುದು</p></div>

ಅಪಘಾತದಲ್ಲಿ ಕಾರು ಹಾಗೂ ಜೀಪ್‌ ನಜ್ಜುಗುಜ್ಜಾಗಿರುವುದು

   

ಕಾಳಗಿ: ತಾಲ್ಲೂಕಿನ ಮಾಡಬೂಳ ಗ್ರಾಮದ ಕಿರು ಮೃಗಾಲಯದ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಶುಕ್ರವಾರ ಜೀಪು ಮತ್ತು ಅಲ್ಟೊ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಭೀಕರ ಅಪಘಾತದಲ್ಲಿ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆರು ಮಂದಿ ಗಾಯಗೊಂಡಿದ್ದಾರೆ.

ಅಪಘಾತದ ತೀವ್ರತೆಗೆ ಕಾರು ಹಾಗೂ ಜೀಪ್‌ ನಜ್ಜುಗುಜ್ಜಾಗಿದೆ.

ADVERTISEMENT

ಕಾರಿನಲ್ಲಿದ್ದ ಸೇಡಂ ನಗರದ ಹರಳಯ್ಯ ಬಸಪ್ಪ ಗುಂಡನೋರ (58) ಮೃತರು. ಕಾರಿನಲ್ಲಿ ಐವರು ಪ್ರಯಾಣಿಕರೊಂದಿಗೆ ಇಬ್ಬರು ಮಕ್ಕಳಿದ್ದರು. ಕಾರು ಸೇಡಂನಿಂದ ಕಲಬುರಗಿ ಕಡೆಗೆ, ಜೀಪು ಕಲಬುರಗಿಯಿಂದ ಮಳಖೇಡಕ್ಕೆ ಬರುತ್ತಿತ್ತು.

ಈ ಮಧ್ಯೆ ಅಪಘಾತ ಸಂಭವಿಸಿದ್ದು ಕಾರು ಚಾಲಕ ಹಣಮಂತ ಭೀಮಶಾ ಸಾತನೂರ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ, ಪ್ರಭಾರ ಸಿಪಿಐ ವನಂಜಯಕರ್, ಪಿಎಸ್ಐ ಗೌತಮ ಗುತ್ತೇದಾರ, ಕ್ರೈಂ ಪಿಎಸ್ಐ ಸಿದ್ದಲಿಂಗ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಈ ಕುರಿತು ಮಾಡಬೂಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.