ಆಳಂದ(ಕಲಬುರಗಿ ಜಿಲ್ಲೆ): ತಾಲ್ಲೂಕಿನ ಚಿಂಚೋಳಿ ಕೆ ಗ್ರಾಮದಲ್ಲಿ ಧಾರಾಕಾರ ಮಳೆಗೆ ಮನೆಯ ಗೋಡೆ ಕುಸಿದು ಮನೆಯಲ್ಲಿ ಕಟ್ಟಿದ ಎರಡು ಆಕಳು ಮೃತಪಟ್ಟ ಘಟನೆ ಶನಿವಾರ ರಾತ್ರಿ ನಡೆದಿದೆ.
ಕೃಷಿ ಕೂಲಿಕಾರ್ಮಿಕ ಹನುಮಂತರಾಯ ಮಾದಪ್ಪ ಖೋಬ್ರೆ ಅವರು ಹೈನುಗಾರಿಕೆ ಉಪಜೀವನ ನಡೆಸುತ್ತಿದ್ದರು. ಸತತ ಮಳೆಯ ಕಾರಣದಿಂದ ಮನೆಯಲ್ಲಿನ ಕೊಟ್ಟಿಗೆಯಲ್ಲಿ ಎರಡು ಆಕಳು ಕಟ್ಟಿದರು. ದಿಢೀರನೆ ಮಳೆಗೆ ಗೋಡೆ ಮತ್ತು ಚಾವಣಿಯು ಕುಸಿದು ಕಟ್ಟಿದ ಆಕಳು ಮೇಲೆ ಬಿದ್ದ ಪರಿಣಾಮವಾಗಿ ಸ್ಥಳದಲ್ಲಿಯೇ ಮೃತಪಟ್ಟಿವೆ.
ಹೈನುಗಾರಿಕೆ ನಂಬಿಕೊಂಡು ಬದುಕುವ ಕುಟುಂಬವು ಈಗ ಉಪಜೀವನದ ಆಧಾರವು ಕಳೆದುಕೊಂಡು ಬೀದಿಪಾಲು ಆದಂತೆ ಆಗಿದೆ. ಬಡರೈತನ ಕುಟುಂಬಕ್ಕೆ ಸರ್ಕಾರ ಒಂದು ಲಕ್ಷ ರೂಪಾಯಿ ಪರಿಹಾರ ನೀಡುವ ಮೂಲಕ ನೆರವು ನೀಡಲು ಸಾಮಾಜಿಕ ಕಾರ್ಯಕರ್ತ ಮೃತ್ಯುಂಜಯ ಪಾಟೀಲ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.