ಕಲಬುರಗಿಯಲ್ಲಿ ಕೊಲೆಯಾದ ಯುವಕ ಮರೆಪ್ಪ ಕಟ್ಟಿಮನಿ
ಕಲಬುರಗಿ: ನಗರದ ಹೀರಾಪುರ ಬಡಾವಣೆ ಹಿಂದಿನ ಕೆಎಸ್‌ಆರ್‌ಟಿಸಿ ಕಾಲೊನಿಯಲ್ಲಿ ಭಾನುವಾರ ತಡರಾತ್ರಿ ಯುವಕರೊಬ್ಬರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಕಲಬುರಗಿ ತಾಲೂಕಿನ ಮೈನಾಳ ಗ್ರಾಮದ ಮರೆಪ್ಪ ಕಟ್ಟಿಮನಿ (24) ಕೊಲೆಯಾದ ಯುವಕ.
ಕೊಲೆಯಾದ ಮರೆಪ್ಪ ಕಟ್ಟಿಮನಿ ಗೌಂಡಿ ಹಾಗೂ ಡ್ರೈವರ್ ಕೆಲಸ ಮಾಡುತ್ತಿದ್ದ.
ನಗರದ ಜಿಮ್ಸ್ ಆಸ್ಪತ್ರೆಯ ಶವಗಾರದ ಬಳಿ ತಾಯಿ ಜಗದೇವಿ ಕಟ್ಟಿಮನಿ, ಅಕ್ಕ ಸುನೀತಾ ಹಾಗೂ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.
ಈ ಕುರಿತು ನಗರದ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.