ADVERTISEMENT

ಕಲಬುರಗಿ: ಕಾರ ಹುಣ್ಣಿಮೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 7:27 IST
Last Updated 15 ಜೂನ್ 2022, 7:27 IST
ಕಲಬುರಗಿಯ ಜಗತ್ ಬಡಾವಣೆಯಲ್ಲಿ ಮಂಗಳವಾರ ಸಂಜೆ ಕಾರಹುಣ್ಣಿಮೆ ಅಂಗವಾಗಿ ನಡೆದ ಎತ್ತುಗಳ ಮೆರವಣಿಗೆಯಲ್ಲಿ ಅಲ್ಲಮಪ್ರಭು ಪಾಟೀಲ, ದತ್ತಾತ್ರೇಯ ಪಾಟೀಲ ರೇವೂರ ಹಾಗೂ ಬಡಾವಣೆಯ ಮುಖಂಡರು ಭಾಗವಹಿಸಿದ್ದರು
ಕಲಬುರಗಿಯ ಜಗತ್ ಬಡಾವಣೆಯಲ್ಲಿ ಮಂಗಳವಾರ ಸಂಜೆ ಕಾರಹುಣ್ಣಿಮೆ ಅಂಗವಾಗಿ ನಡೆದ ಎತ್ತುಗಳ ಮೆರವಣಿಗೆಯಲ್ಲಿ ಅಲ್ಲಮಪ್ರಭು ಪಾಟೀಲ, ದತ್ತಾತ್ರೇಯ ಪಾಟೀಲ ರೇವೂರ ಹಾಗೂ ಬಡಾವಣೆಯ ಮುಖಂಡರು ಭಾಗವಹಿಸಿದ್ದರು   

ಕಲಬುರಗಿ: ರೈತ ಸಮುದಾಯಕ್ಕೆ ಅತಿ ಹತ್ತಿರವಾದ ಕಾರ ಹುಣ್ಣಿಮೆ ಅಂಗವಾಗಿ ಮಂಗಳವಾರ ಜಿಲ್ಲೆಯಾದ್ಯಂತ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಎತ್ತುಗಳನ್ನು ಸಿಂಗರಿಸಿ, ಓಡಿಸಿ ಖುಷಿಪಟ್ಟರು.

ಬೆಳಿಗ್ಗೆಯಿಂದಲೇ ಎತ್ತುಗಳ ಮೈತೊಳೆದು, ಮೈಗೆ ಅರಿಶಿನ ಹಚ್ಚಿದರು. ಕೊಂಬುಗಳಿಗೆ ಬಣ್ಣ ಹಚ್ಚಿದರು. ಎತ್ತಿಗಳ ಬಾಯಿಗೆ ಗೊಟ್ಟಾ ಹಾಕಿದರು. ಮನೆಯಲ್ಲಿ ಹಬ್ಬಕ್ಕೆ ತಯಾರಿಸಿದ ಹೋಳಿಗೆಯನ್ನು ತಿನ್ನಿಸಿದರು.

ನಂತರ ಊರ ಅಗಸಿಯ ಬಳಿ ಎತ್ತುಗಳನ್ನು ತಂದು ಗ್ರಾಮಸ್ಥರ ಸಮ್ಮುಖದಲ್ಲಿ ಓಡಿಸಿ ಕರಿ ಹರಿಯುವ ಶಾಸ್ತ್ರವನ್ನು ಪೂರ್ಣಗೊಳಿಸಿ
ದರು. ಅಫಜಲಪುರ ತಾಲ್ಲೂಕಿನ ಬಳೂರ್ಗಿ ಗ್ರಾಮದಲ್ಲಿ ಕಾರು ಹುಣ್ಣಿಮೆ ಸಮಯದಲ್ಲಿ 2 ಬಂಡಿಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ದತ್ತು ಪೂಜಾರಿ ಎಂಬುವರಿಗೆ ಗಾಯವಾಗಿದೆ. ₹ 1.80 ಲಕ್ಷ ವೆಚ್ಚದ ಜೋಡಿ ಎತ್ತುಗಳ ಕೊಂಬು ಮುರಿದಿದೆ. ಕಲಬುರಗಿಯ ಜಗತ್ ಬಡಾವಣೆಯಲ್ಲಿ ಕಾರಹುಣ್ಣಿಮೆ ಹಬ್ಬದ ನಿಮಿತ್ತ ಎತ್ತುಗಳನ್ನು ಸಿಂಗರಿಸಿ ಹಬ್ಬ ಆಚರಿಸಲಾಯಿತು.

ADVERTISEMENT

ಕುಣಿದು ಸಂಭ್ರಮಿಸಿದ ಪಾಟೀಲದ್ವಯರು

ರಾಜಕೀಯವಾಗಿ ಎದುರಾಳಿಗಳಾದ ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಹಾಗೂ ಕಾಂಗ್ರೆಸ್ ಮುಖಂಡ, ವಿಧಾನಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭುಪಾಟೀಲಅವರು ಕಾರಹುಣ್ಣಿಮೆ ಅಂಗವಾಗಿ ಜಗತ್ ಬಡಾವಣೆಯಲ್ಲಿ ಆಯೋಜಿಸಿದ್ದ ಎತ್ತಿನ ಮೆರವಣಿಗೆ ವೇಳೆ ಪರಸ್ಪರ ಎದುರು ಬದುರು ನಿಂತು ಕುಣಿದು ಕುಪ್ಪಳಿಸಿದರು. ಬಡಾವಣೆಯ ಜನರೊಂದಿಗೆ ಫೋಟೊ ತೆಗೆಸಿಕೊಂಡರು.

ಪಾಲಿಕೆ ಸದಸ್ಯ ವಿಶಾಲ ನವರಂಗ, ಬಸವೇಶ್ವರ ಸೇವಾ ಸಂಸ್ಥೆಯ ಅಧ್ಯಕ್ಷ ಸಿದ್ದಣ್ಣ ಗುಡ್ಡಾ, ಉಪಾಧ್ಯಕ್ಷ ಶರಣು ಅವಂಟಗಿ, ಪಾಲಿಕೆ ಮಾಜಿ ಸದಸ್ಯೆ ಜಗದೇವಿ ಸೋಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.