ADVERTISEMENT

ಶ್ರೀಶೈಲದಲ್ಲಿ ಕರ್ನಾಟಕ ಭವನ ನಿರ್ಮಾಣ: ಶಶಿಕಲಾ ಜೊಲ್ಲೆ

ಶಾಸಕ ಮತ್ತಿಮಡು ಪ್ರಶ್ನೆಗೆ ಸಚಿವೆ ಜೊಲ್ಲೆ ಉತ್ತರ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2022, 14:18 IST
Last Updated 21 ಫೆಬ್ರುವರಿ 2022, 14:18 IST
ಶಶಿಕಲಾ ಜೊಲ್ಲೆ
ಶಶಿಕಲಾ ಜೊಲ್ಲೆ   

ಕಮಲಾಪುರ: ಆಂಧ್ರಪ್ರದೇಶದ ಶ್ರೀಶೈಲದಲ್ಲಿರುವ ರಾಜ್ಯ ಛತ್ರದ ಆವರಣದಲ್ಲಿ ಹೊಸದಾಗಿ ಕರ್ನಾಟಕ ಭವನ ನಿರ್ಮಾಣ ಮಾಡಲಾಗುವುದು ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ರಾಜ್ಯದಿಂದ ಶ್ರೀಶೈಲಕ್ಕೆ ಅತಿ ಹೆಚ್ಚು ಭಕ್ತರು ಕಾಲ್ನಡಿಗೆಯಲ್ಲಿ ತೆರಳುತ್ತಿದ್ದಾರೆ. ಸರ್ಕಾರ ಶ್ರೀಶೈಲದಲ್ಲಿ ರಾಜ್ಯದ ಭಕ್ತರಿಗೆ ವಸತಿ ಮತ್ತಿತರ ಮೂಲ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಂಡಿದಿಯೇ ಎಂದು ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ಸೋಮವಾರ ಅಧಿವೇಶನದಲ್ಲಿ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.

ಭವನ ನಿರ್ಮಾಣ ಮಾಡಲು ₹3.24 ಲಕ್ಷ ಮಂಜೂರಾತಿ ನೀಡಲಾಗಿದೆ. ಮೊದಲ ಹಂತದಲ್ಲಿ ₹ 1 ಕೋಟಿ ಅನುದಾನವನ್ನು ರಾಯಚೂರು ಜಿಲ್ಲಾಧಿಕಾರಿಗೆ ಒದಗಿಸಲಾಗಿದೆ. ಆಡಳಿತಾತ್ಮಕ ಅನುಮೋದನೆ ನೀಡಿದ ಕೂಡಲೇ ಕಾಮಗಾರಿ ಆರಂಭಿಸಲಾಗುವುದು. ಜತೆಗೆ ರಾಜ್ಯ ಛತ್ರದ ನಿವೇಶನದಲ್ಲಿ ಅಂಗಡಿ ಮಳಿಗೆಗೆಗಳು ವಸತಿ ಗೃಹಗಳನ್ನೊಳಗೊಂಡ ಹೊಸ ಕಟ್ಟಡ ನಿರ್ಮಿಸುವ ಬಗ್ಗೆ ಸಮಗ್ರ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಿಂದ ಯೋಜನೆ ತಯಾರಿಸಲಾಗುತ್ತಿದೆ.

ADVERTISEMENT

ಪ್ರಸ್ತುತ ಶ್ರೀಶೈಲದಲ್ಲಿ 24 ಕೊಠಡಿಗಳನ್ನೊಳಗೊಂಡ ಎರಡು ಭವನಗಳಿವೆ. ಇದರಲ್ಲಿ ರಾಜ್ಯದ ಭಕ್ತರಿಗೆ ವಸತಿ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ. ಈ ಕಟ್ಟಡಗಳು ಶೀಥಿಲಾವಸ್ಥೆಯಲ್ಲಿರುವುದು ಕಂಡು ಬಂದಿದ್ದು, ದುರಸ್ತಿಗೆ ₹3 ಕೋಟಿ ಅನುದಾನ ನೀಡುವಂತೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಪ್ರಸ್ತಾವನೆ ಸಲ್ಲಿಸಿದ್ದಾರೆ. ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಉತ್ತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.