ಕಲಬುರಗಿಯಲ್ಲಿ ಮಳೆ
ಕಲಬುರಗಿ: ನಗರದಲ್ಲಿ ಮಂಗಳವಾರ ಸಂಜೆ 4 ಗಂಟೆಯಿಂದ ಬಿರುಸಿನ ಮಳೆ ಸುರಿಯಿತು.
ಬೆಳಿಗ್ಗೆಯಿಂದ ಮೋಡಕವಿದ ಹಾಗೂ ಬಿಸಿಲಿನ ವಾತಾವರಣ ಇತ್ತು. ಮಧ್ಯಾಹ್ನದ ಹೊತ್ತಿನಲ್ಲಿ ವಿಪರೀತ ಸೆಕೆ ಇತ್ತು.
ಮಧ್ಯಾಹ್ನ 3 ಗಂಟೆ ಹೊತ್ತಿಗೆ ಆಗಸದಲ್ಲಿ ಮೋಡಗಳು ದಟ್ಟೈಸಿ, ಕತ್ತಲಿನಂಥ ವಾತಾವರಣ ನಿರ್ಮಾಣವಾಗಿತ್ತು. ಮಧ್ಯಾಹ್ನ 3.45ರ ಹೊತ್ತಿಗೆ ತಂತುರು ಮಳೆಆರಂಭವಾಗಿ, ಬಳಿಕ 20 ನಿಮಿಷ ಧಾರಾಕಾರವಾಗಿ ಸುರಿಯಿತು.
ಕಳೆದೊಂದು ವಾರದಿಂದ ಮಳೆ ಇಲ್ಲದೇ ಬೇಸಿಗೆಯಂತಹ ವಾತಾವರಣವಿತ್ತು. ಸೋಮವಾರ ಸಂಜೆಯೂ ಮೋಡ ಕವಿದು, 7.30ರ ಸುಮಾರಿಗೆ ಕೆಲ ನಿಮಿಷ ತುಂತುರು ಮಳೆಯಾಗಿತ್ತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.