ADVERTISEMENT

ಕಲಬುರಗಿ: ನಗರದ ಹಲವೆಡೆ ಸಾಧಾರಣ ಮಳೆ, ವಾಹನ ಸವಾರರ ಪರದಾಟ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 7:41 IST
Last Updated 3 ಜುಲೈ 2022, 7:41 IST
ಕಲಬುರಗಿಯಲ್ಲಿ ಮಳೆ
ಕಲಬುರಗಿಯಲ್ಲಿ ಮಳೆ   

ಕಲಬುರಗಿ: ನಗರದಲ್ಲಿ ಭಾನುವಾರ ಮಧ್ಯಾಹ್ನ ಸಾಧಾರಣ ಮಳೆ ಸುರಿಯಿತು.

ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನ 12.40ರ ವೇಳೆಗೆ ಜಗತ್ ಸರ್ಕಲ್, ಆನಂದ್ ಹೋಟೆಲ್ ಸರ್ಕಲ್, ಗೋವಾ ಹೋಟೆಲ್ ಸರ್ಕಲ್, ಸೂಪರ್ ಮಾರ್ಕೆಟ್, ಶರಣಬಸವೇಶ್ವರ ದೇವಸ್ಥಾನ ಸೇರಿದಂತೆ ಹಲವೆಡೆ ಸಾಧಾರಣ ಮಳೆಯಾಯಿತು.

ಮಳೆಯಿಂದಾಗಿ ರಸ್ತೆಯ ತಗ್ಗು ಗುಂಡಿಗಳಲ್ಲಿ‌ ನೀರು ನಿಂತಿತು. ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ಮಳೆಯಲ್ಲಿ ನೆನೆದುಕೊಂಡೇ ಹೋಗುತ್ತಿದ್ದ ದೃಶ್ಯ ಅಲ್ಲಲ್ಲಿ ಕಂಡುಬಂತು. ಕೆಲವರು ರಸ್ತೆ ಬದಿಯಲ್ಲಿನ ಮರದ ಕೆಳಗೆ ನಿಂತಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.