ADVERTISEMENT

ಕಲಬುರಗಿ: ಜ.4ರಂದು ಕವಿ ಸಂಗಮ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 7:33 IST
Last Updated 2 ಜನವರಿ 2026, 7:33 IST
ಶಾಮರಾವ ಕೊರವಿ
ಶಾಮರಾವ ಕೊರವಿ   

ಕಲಬುರಗಿ: ‘ರಂಗಮಿತ್ರ ನಾಟ್ಯ ಸಂಘ, ಕರ್ನಾಟಕ ರಾಜ್ಯ ಬರಹಗಾರರ ಕವಿಗಳ ಸಂಘದಿಂದ ಜ.4ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಕವಿ ಸಂಗಮ-2026, ನಮ್ಮ ನಾಟಕ ನಮ್ಮ ಹಕ್ಕು ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ರಂಗಮಿತ್ರ ನಾಟ್ಯ ಸಂಘದ ಜಿಲ್ಲಾಧ್ಯಕ್ಷ ಶಾಮರಾವ ಕೊರವಿ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 50 ಸಾಧಕರಿಗೆ ‘ಶ್ರೀವಿಜಯರತ್ನ’ ಹಾಗೂ 26 ಜನರಿಗೆ ‘ಕನ್ನಡ ಕವಿರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದರು.

‘ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್‌ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಜ್ಯೋತಿ ಬೆಳಗಿಸಲಿದ್ದಾರೆ. ಶಾಸಕ ಅವಿನಾಶ ಜಾಧವ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಸವರಾಜ ಬೆಣ್ಣೂರಕರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ’ ಎಂದರು.

ADVERTISEMENT

‘ಮಧ್ಯಾಹ್ನ 1.30ಕ್ಕೆ ಪ್ರದರ್ಶನಗೊಳ್ಳಲಿರುವ ‘ತಾಳಿ ಹರಿಯಲಿಲ್ಲ ಶೀಲ ಉಳಿಯಲಿಲ್ಲ’ ಎಂಬ ಸಾಮಾಜಿಕ ನಾಟಕಕ್ಕೆ ಮುಖಂಡ ರಮೇಶ ತಿಪ್ಪನೂರ ಚಾಲನೆ ನೀಡಲಿದ್ದಾರೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಂಕರಜಿ ಹೂವಿನ ಹಿಪ್ಪರಗಿ, ಗುರಪ್ಪ ಪಾಟೀಲ, ಲಕ್ಷ್ಮಣ ಅವುಂಟಿ, ಜಗನ್ನಾಥ ಕಟ್ಟಿ, ಶ್ರೀಮಂತ, ಅರ್ಜುನ ಜಮಾದಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.