ADVERTISEMENT

ಕೆ–ಸಿಇಟಿ: ಕಾಯಕ ಕಾಲೇಜಿಗೆ ಭಾಗೇಶ ರೆಡ್ಡಿ ಪ್ರಥಮ

​ಪ್ರಜಾವಾಣಿ ವಾರ್ತೆ
Published 25 ಮೇ 2025, 13:16 IST
Last Updated 25 ಮೇ 2025, 13:16 IST
ಭಾಗೇಶ ರೆಡ್ಡಿ
ಭಾಗೇಶ ರೆಡ್ಡಿ   

ಕಲಬುರಗಿ: ನಗರದ ಕೆಸರಟಗಿ ರಸ್ತೆಯಲ್ಲಿರುವ ಕಾಯಕ ಫೌಂಡೇಷನ್ ವಸತಿ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ವಿದ್ಯಾರ್ಥಿಗಳು ಕೆ–ಸಿಇಟಿಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ಭಾಗೇಶ ರೆಡ್ಡಿ ವೆಟರ್ನರಿಯಲ್ಲಿ 4,003ನೇ, ಬಿಎಸ್ಸಿ ಅಗ್ರಿಯಲ್ಲಿ 4,474ನೇ, ಬಿಎಸ್ಸಿ ನರ್ಸಿಂಗ್‌ನಲ್ಲಿ 5,059ನೇ, ಎಂಜಿನಿಯರಿಂಗ್ ವಿಭಾಗದಲ್ಲಿ 10,908 ರ‍್ಯಾಂಕ್ ಪಡೆದು ಕಾಲೇಜಿಗೆ ಮೊದಲ ಸ್ಥಾನ ಪಡೆದಿದ್ದಾರೆ.

ಬಸವರಾಜ ಮಲ್ಲಾರೆಡ್ಡಿ ವೆಟರ್ನರಿಯಲ್ಲಿ 8,854ನೇ ರ‍್ಯಾಂಕ್, ಬಿಎಸ್ಸಿ ನರ್ಸಿಂಗ್‌ನಲ್ಲಿ 9,909ನೇ, ಬಿವೈಎನ್‌ಎಸ್‌ನಲ್ಲಿ 10,722ನೇ ರ‍್ಯಾಂಕ್ ಪಡೆದಿದ್ದಾರೆ.

ADVERTISEMENT

ಗೀತಾ ರಾಯಪ್ಪ ಬಿಎನ್‌ವೈಎಸ್‌ನಲ್ಲಿ 8,755ನೇ ರ‍್ಯಾಂಕ್, ಸೀಮಾ ಚಿನ್ನಾರೆಡ್ಡಿ ಬಿಎಸ್ಸಿ ನರ್ಸಿಂಗ್‌ನಲ್ಲಿ 8,479ನೇ ರ‍್ಯಾಂಕ್, ಭಾಗ್ಯ  ನಾಗೇಂದ್ರ ವೆಟರ್ನರಿಯಲ್ಲಿ 10,000ನೇ ರ‍್ಯಾಂಕ್ ಪಡೆದಿದ್ದಾರೆ ಎಂದು ಕಾಲೇಜು ಪ್ರಕಟಣೆಯಲ್ಲಿ ತಿಳಿಸಿದೆ.

ಬಸವರಾಜ ಮಲ್ಲಾರೆಡ್ಡಿ
ಗೀತಾ ರಾಯಪ್ಪ
ಸೀಮಾ ಚಿನ್ನಾರೆಡ್ಡಿ
ಭಾಗ್ಯಾ ನಾಗೇಂದ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.