ಅಫಜಲಪುರ: ತಾಲ್ಲೂಕಿನ ಚೌಡಾಪುರ್ ಗ್ರಾಮದ ಹತ್ತಿರದ ಚಿಣಮಗೇರಿ ಕೆಪಿಆರ್ ಸಕ್ಕರೆ ಕಾರ್ಖಾನೆಯ ಚಿಮುಣಿಯಿಂದ ಹೊರಬರುತ್ತಿರುವ ವಿಷಪೂರಿತ ಕಪ್ಪು-ಬಿಳುಪು ತುಣುಕುಗಳಿಂದ ಆಗುತ್ತಿರುವ ಸಮಸ್ಯೆ ಕುರಿತು ಚೌಡಾಪೂರ, ಚಿಣಮಗೇರಿ, ದೇವಲಗಾಣಗಾಪುರ, ತಾಂಡಾದ ಸಾರ್ವಜನಿಕರು ಹಾಗೂ ರೈತರು ಚೌಡಾಪುರ್ ವೃತ್ತದಲ್ಲಿ ಶುಕ್ರವಾರ 2 ಗಂಟೆಗಳ ಕಾಲ ರಸ್ತೆ ತಡೆದು ಟೈರಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡ ಅವ್ವಣ್ಣಗೌಡ ಪಾಟೀಲ್ ಮಾತನಾಡಿ, ಕೆಪಿಆರ್ ಸಕ್ಕರೆ ಕಾರ್ಖಾನೆಯಿಂದ ಸುಮಾರು 10-15 ಗ್ರಾಮಗಳಿಗೆ ತೊಂದರೆಯಾಗುತ್ತಿದೆ. ಕಾರ್ಖಾನೆ ಹೊರಬಿಡುವ ಬೂದಿ ಹಾಗೂ ಹೊಗೆಯಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ಕುರಿತು ಅನೇಕ ಬಾರಿ ತಹಶೀಲ್ದಾರ್‌ರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಶೀಘ್ರ ಕೆಪಿಆರ್ ಸಕ್ಕರೆ ಕಾರ್ಖಾನೆ ಮೇಲೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ರಮೇಶ್ ಜಮಾದಾರ, ಕಾಡಸಿದ್ದ, ಅವ್ವಣ್ಣಗೌಡ ಪಾಟೀಲ್, ಮಾಳಪ್ಪ ಪೂಜಾರಿ, ಮಲ್ಲಪ್ಪ ಮಾದರ್, ದೇವಿಂದ್ರ ಜಮಾದಾರ, ಕಲ್ಯಾಣಿ ಗಂಡೋಳಿ, ರಾಜು ಜಮಾದಾರ, ಆರ್.ಡಿ. ಪೂಜಾರಿ, ನಾಗರಾಜ ಚೋರಮೂಲೆ, ಶಿವಯೋಗಪ್ಪ ಬಿರಾದಾರ್, ಸುಭಾಸಚಂದ್ರ ದುಖಾಂದರ್, ಮಂಜು ಚಕ್ರ, ನಾಗಪ್ಪ ಕಂಬಾರ ಸೇರಿದಂತೆ ಅನೇಕರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.