ADVERTISEMENT

‘ಸರ್ಕಾರಿ ಸೌಲಭ್ಯಗಳ ಬಗ್ಗೆ ಪಾಲಕರಿಗೆ ತಿಳಿಸಿ’

​ಪ್ರಜಾವಾಣಿ ವಾರ್ತೆ
Published 12 ಜುಲೈ 2023, 14:47 IST
Last Updated 12 ಜುಲೈ 2023, 14:47 IST
ಕಲಬುರಗಿಯಲ್ಲಿ ಬುಧವಾರ ನಡೆದ ಮಹಿಳೆಯರ ಉದ್ಯೋಗ ಮೇಳದಲ್ಲಿ ಕಾರ್ಮಿಕ ಇಲಾಖೆಯ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ ಮಾತನಾಡಿದರು
ಕಲಬುರಗಿಯಲ್ಲಿ ಬುಧವಾರ ನಡೆದ ಮಹಿಳೆಯರ ಉದ್ಯೋಗ ಮೇಳದಲ್ಲಿ ಕಾರ್ಮಿಕ ಇಲಾಖೆಯ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ ಮಾತನಾಡಿದರು   

ಕಲಬುರಗಿ: ‘ಕಾರ್ಮಿಕ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಎಲ್ಲ ವಿದ್ಯಾರ್ಥಿಗಳು ತಮ್ಮ ಪಾಲಕರಿಗೆ ತಿಳಿಸಬೇಕು’ ಎಂದು ಕಟ್ಟಡ ಮತ್ತು ಕಾರ್ಮಿಕ ಇಲಾಖೆಯ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ ಸಲಹೆ ನೀಡಿದರು.

ನಗರದ ಪ್ರೀಮಿಯರ್ ಸ್ಪಿನ್ನಿಂಗ್ ವೀವಿಂಗ್ ಮಿಲ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಹಮ್ಮಿಕೊಂಡಿದ್ದ ಮಹಿಳೆಯರ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು. 

‘ರಾಜ್ಯ ಸರ್ಕಾರ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಕಾರ್ಮಿಕ ವರ್ಗದವರಿಗೆ ಉಚಿತವಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಜೀವನ ಸಾಗಿಸಬೇಕು. ಯಾವುದೇ ಮಾಹಿತಿ ಬೇಕಾದರೂ ನೇರವಾಗಿ ನನ್ನನ್ನು ಸಂಪರ್ಕಿಸಿ, ಮಧ್ಯವರ್ತಿಗಳ ಮಾತು ಕೇಳಬೇಡಿ‘ ಎಂದ ಅವರು ‘ಮಾಧ್ಯಮ ಸೇರಿದಂತೆ ಸಂಘ ಸಂಸ್ಥೆಗಳು ಕಾರ್ಮಿಕರಿಗೆ ಅನುಕೂಲವಾಗುವಂತಹ ಮಾಹಿತಿಯನ್ನು ಪ್ರಕಟಿಸಬೇಕು‘ ಎಂದು ಕೋರಿದರು

ADVERTISEMENT

ಈ ವೇಳೆ ಮುಖಂಡರಾದ ಮಲ್ಲೇಶಿ ಸಜ್ಜನ್, ಶಿವಪುತ್ರ ಹಾಗರಗಿ, ಪತ್ರಕರ್ತ ಚಿದಾನಂದ ರೂಲೆ, ಮಲ್ಲಿಕಾರ್ಜುನ ಹುದ್ದಾರ, ತಿಪ್ಪಣ್ಣ ಮೌರ್ಯ, ಎಚ್.ಆರ್.ಶಿವಯೋಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.