ADVERTISEMENT

ಬೆಂಬಲ ಬೆಲೆ ಕಡಲೆ ಖರೀದಿ: ನೋಂದಣಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2022, 7:18 IST
Last Updated 1 ಏಪ್ರಿಲ್ 2022, 7:18 IST
ssss
ssss   

ಕಾಳಗಿ: ಇಲ್ಲಿನ ನೀಲಕಂಠ ಕಾಳೇಶ್ವರ ರೈತ ಉತ್ಪಾದಕರ ಸಂಸ್ಥೆಯು ಕೃಷಿ ಮಾರಾಟ ಮಂಡಳಿ ಆಶ್ರಯದಲ್ಲಿ 2021-22ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ಗುಣಮಟ್ಟದ ಕಡಲೆ ಖರೀದಿಸಲು ಖರೀದಿ ಕೇಂದ್ರ ತೆರೆದಿದೆ. ಪ್ರತಿ ಕ್ವಿಂಟಲ್‌ಗೆ ಕೇಂದ್ರ ಸರ್ಕಾರ ನಿಗದಿಪಡಿಸಿದ ₹5230 ಬೆಂಬಲ ಬೆಲೆ ಮಾರ್ಗ ಸೂಚಿಗಳನ್ವಯ ಖರೀದಿ ಕೇಂದ್ರ ಸ್ಥಾಪಿಸಲಾಗಿದೆ.

ಎಕರೆಗೆ ಕನಿಷ್ಠ 4 ಕ್ವಿಂಟಲ್, ಗರಿಷ್ಠ 15 ಕ್ವಿಂಟಲ್ ಖರೀದಿಗೆ ತೆಗೆದು ಕೊಳ್ಳಲಾಗುವುದು. ರೈತರು ತಮ್ಮ ಪಹಣಿ, ಆಧಾರಕಾರ್ಡ್, ಚಾಲ್ತಿ ಬ್ಯಾಂಕ್ ಖಾತೆ ಜಿರಾಕ್ಸ್ ಪ್ರತಿಯೊಂದಿಗೆ ಒಂದುವಾರದೊಳಗೆ ಕಾಳಗಿ ಬಸ್ ನಿಲ್ದಾಣ ಹತ್ತಿರದ ಶಿವಶರಣಪ್ಪ ಕಮಲಾಪುರ ಬಿಲ್ಡಿಂಗ್ (ರೇವಣಸಿದ್ದೇಶ್ವರ ಮೆಡಿಕಲ್ ಮೇಲುಗಡೆ) ಸಂಸ್ಥೆಯ ಕಚೇರಿಯಲ್ಲಿ ಹೆಸರು ನೋಂದಾಯಿಸಬಹುದಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಹರಸೂರ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT