ADVERTISEMENT

ನಂದಿಕೂರ ಚರಂಡಿ ನೀರು ಶುದ್ಧೀಕರಣ ಘಟಕಕ್ಕೆ ಶಾಸಕ ಅಲ್ಲಮಪ್ರಭು ಪಾಟೀಲ ಭೇಟಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 6:29 IST
Last Updated 11 ಫೆಬ್ರುವರಿ 2026, 6:29 IST
ಕಲಬುರಗಿ ಹೊರವಲಯದ ನಂದಿಕೂರ ಚರಂಡಿ ನೀರು ಶುದ್ಧೀಕರಣ ಘಟಕಕ್ಕೆ (ಎಸ್‌ಟಿಪಿ) ಶಾಸಕರಾದ ಅಲ್ಲಮಪ್ರಭು ಪಾಟೀಲ, ಕನೀಜ್‌ ಫಾತಿಮಾ, ಪಾಲಿಕೆ ಮೇಯರ್‌ ವರ್ಷಾ ಜಾನೆ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು
ಕಲಬುರಗಿ ಹೊರವಲಯದ ನಂದಿಕೂರ ಚರಂಡಿ ನೀರು ಶುದ್ಧೀಕರಣ ಘಟಕಕ್ಕೆ (ಎಸ್‌ಟಿಪಿ) ಶಾಸಕರಾದ ಅಲ್ಲಮಪ್ರಭು ಪಾಟೀಲ, ಕನೀಜ್‌ ಫಾತಿಮಾ, ಪಾಲಿಕೆ ಮೇಯರ್‌ ವರ್ಷಾ ಜಾನೆ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು   

ಕಲಬುರಗಿ: ನಗರದ ಹೊರವಲಯದ ನಂದಿಕೂರ ಚರಂಡಿ ನೀರು ಶುದ್ಧೀಕರಣ ಘಟಕಕ್ಕೆ (ಎಸ್‌ಟಿಪಿ) ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ, ಉತ್ತರ ಮತಕ್ಷೇತ್ರದ ಶಾಸಕಿ ಕನೀಜ್‌ ಫಾತಿಮಾ, ಪಾಲಿಕೆ ಮೇಯರ್‌ ವರ್ಷಾ ಜಾನೆ, ಕೆಯುಐಡಿಎಫ್‌ಸಿ ಎಂಜಿನಿಯರ್ ನಂದೀಶ್ ಸೇರಿದಂತೆ ಪಾಲಿಕೆ, ಜಿಲ್ಲಾಡಳಿತದ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.

ಕಲಬುರಗಿಯ ತ್ಯಾಜ್ಯ, ಗಲೀಜು ಎಲ್ಲವೂ ಭೀಮಾ ನದಿ ಸೇರಿ ಕುಡಿವ ನೀರಲ್ಲಿ ಬೆರೆಯುತ್ತಿದೆ. ಮನೆಗಳಿಗೆ ಹೊಲಸು ನೀರು ಪೂರೈಕೆ ಆಗುತ್ತಿದೆ ಎಂಬ ಆರೋಪಗಳು ಹಾಗೂ ಪತ್ರಿಕಾ ವರದಿಗಳನ್ನು ಆಧರಿಸಿ ಈ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಭೇಟಿ ನೀಡಿದ್ದರು.

ನಗರದ ಸಾವಿರಾರು ಟನ್ ತ್ಯಾಜ್ಯ ಹರಿದು ಭೀಮೆ ಒಡಲು ಸೇರುತ್ತಿದೆ. ಇದನ್ನು ತಪ್ಪಿಸಬೇಕು. ಜನರಿಗೆ ಶುದ್ಧ ನೀರು ಕೊಡಬೇಕು. ಈಗಿರುವ ಘಟಕ ಕೇವಲ 40 ಎಂಎಲ್‌ಡಿ ಮಾತ್ರವೇ ಶುದ್ಧೀಕರಿಸುವ ಸಾಮರ್ಥ್ಯ ಹೊಂದಿದೆ. ಇದರ ಸಾಮರ್ಥ್ಯ ಹೆಚ್ಚಿಸಬೇಕು ಎಂದು ಶಾಸಕ ಅಲ್ಲಮಪ್ರಭು ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಇಡೀ ಘಟಕದ ಕಾರ್ಯವೈಖರಿಯನ್ನು ತಂಡದಲ್ಲಿರುವ ಎಂಜಿನಿಯರ್‌ಗಳು ಪರಿಶೀಲನೆ ನಡೆಸಿದರು. ಹಿರಿಯ ಅಧಿಕಾರಿಗಳಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ವರದಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.