ಕಲಬುರ್ಗಿ: ಜಿಲ್ಲೆಯ ವಾಡಿ ಪಟ್ಟಣದ ಸೆಂಟ್ ಆ್ಯಂಬ್ರೋಸ್ ಖಾಸಗಿ ಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದ ಮುಂದೆ ಹಾಕಿದ ದ್ವಾರದ ಮೇಲೆ ಶಾಸಕ ಪ್ರಿಯಾಂಕ್ ಖರ್ಗೆಅವರ ದೊಡ್ಡ ಕಟೌಟ್ ಹಾಕುವ ಮೂಲಕ ಪರೀಕ್ಷಾ ಸಿಬ್ಬಂದಿ ಪಾಲಕರ ಕೆಂಗಣ್ಣಿಗೆ ಗುರಿಯಾದರು.
ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎಂಟ್ರನ್ಸ್ ಸ್ಯಾನಿಟೈಸರ್ ದ್ವಾರ ಅಳವಡಿಸಲಾಗಿದೆ. ಇದರ ಮೇಲೆ ಶಾಸಕರ ಚಿತ್ರಪಟಗಳು ರಾರಾಜಿಸುತ್ತಿವೆ. ಸ್ಥಳೀಯರು ಇದರ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟರು.
ಕೇಂದ್ರದತ್ತ ಬಂದ ಸ್ಥಳೀಯ ಬಿಜೆಪಿ ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಭಾವಚಿತ್ರ ತೆರವುಗೊಳಿಸಲು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.