ಮುನಿರಾಬಾದ್: ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಯಾತ್ರಾಸ್ಥಳ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿನ 25 ಹುಂಡಿಗಳನ್ನು ಸೋಮವಾರ ಎಣಿಕೆ ಮಾಡಲಾಗಿದ್ದು ಒಟ್ಟು ₹ 1.17 ಕೋಟಿಗೂ ಹೆಚ್ಚು ನಗದು ಸಂಗ್ರಹವಾಗಿದೆ.
ಜೊತೆಗೆ 133 ಗ್ರಾಂ ಕಚ್ಚಾ ಚಿನ್ನ, 10 ಕಿ.ಗ್ರಾಂ. ಕಚ್ಚಾ ಬೆಳ್ಳಿ ಆಭರಣ ರೂಪದಲ್ಲಿ ಭಕ್ತರಿಂದ ಸಂಗ್ರಹವಾಗಿದೆ. ಇದು ಸುಮಾರು 38 ದಿನಗಳ ಸಂಗ್ರಹವಾಗಿದೆ ಎಂದು ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.