ADVERTISEMENT

ಶಖಾಪುರ ಶ್ರೀಗಳ ಪಾದಯಾತ್ರೆ ಆರಂಭ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2025, 16:08 IST
Last Updated 21 ಮಾರ್ಚ್ 2025, 16:08 IST
ಜೇವರ್ಗಿ : ತಾಲ್ಲೂಕಿನ ಶಖಾಪೂರ ಮಠದ ಪೀಠಾಧಿಪತಿ ಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಆರಂಭಗೊಂಡ ಪಾದಯಾತ್ರೆಗೆ ಮಾಜಿ ಜಿಪಂ ಸದಸ್ಯ ಅರುಣಕುಮಾರ ಪಾಟೀಲ ಚಾಲನೆ ನೀಡಿದರು.
ಜೇವರ್ಗಿ : ತಾಲ್ಲೂಕಿನ ಶಖಾಪೂರ ಮಠದ ಪೀಠಾಧಿಪತಿ ಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಆರಂಭಗೊಂಡ ಪಾದಯಾತ್ರೆಗೆ ಮಾಜಿ ಜಿಪಂ ಸದಸ್ಯ ಅರುಣಕುಮಾರ ಪಾಟೀಲ ಚಾಲನೆ ನೀಡಿದರು.   

ಜೇವರ್ಗಿ: ‘ತಾಲ್ಲೂಕಿನ ಶಖಾಪುರ ಗ್ರಾಮದ ಆರಾಧ್ಯ ದೈವ ವಿಶ್ವಾರಾಧ್ಯರು ಮತ್ತು ಬಸವಾಂಬೆ ತಾಯಿಯವರ 74ನೇ ಜಾತ್ರಾ ಮಹೋತ್ಸವದ ಅಂಗವಾಗಿ ಹಾಗೂ ಲೋಕಕಲ್ಯಾಣಕ್ಕಾಗಿ ಬಸವಾಂಬೆ ತಾಯಿಯವರ ಜನ್ಮಸ್ಥಳ ಕಲಬುರಗಿ ತಾಲ್ಲೂಕಿನ ಜೋಗೂರದಿಂದ ಶುಕ್ರವಾರ ಪಾದಯಾತ್ರೆ ಕೈಗೊಳ್ಳಲಾಯಿತು.

ಶಖಾಪುರ ಮಠದ ಪೀಠಾಧಿಪತಿ ಸಿದ್ಧರಾಮ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಆರಂಭಗೊಂಡ ಪಾದಯಾತ್ರೆಗೆ ಜಿ.ಪಂ ಮಾಜಿ ಸದಸ್ಯ ಅರುಣಕುಮಾರ ಪಾಟೀಲ ಚಾಲನೆ ನೀಡಿದರು. ಜೋಗೂರಿನ ಮಹಾಲಕ್ಷ್ಮೀ ದೇವಸ್ಥಾನದಿಂದ ವಿವಿಧ ಬಾಜಾ ಭಜಂತ್ರಿ, ಕಲಾತಂಡಗಳು, ಭಜನಾ ಮೇಳಗಳೊಂದಿಗೆ ಆರಂಭಗೊಂಡ ಪಾದಯಾತ್ರೆ ಜೋಗೂರ ಗ್ರಾಮಸ್ಥರು ಅದ್ದೂರಿಯಾಗಿ ಬೀಳ್ಕೊಟ್ಟರು.

ಪಾದಯಾತ್ರೆಯು ಮೈನಾಳ ಕ್ರಾಸ್, ಚಿನ್ನಮಳ್ಳಿ, ಕಲ್ಲೂರ ಕ್ರಾಸ್ ಮೂಲಕ ಸಂಜೆ ನೆಲೋಗಿ ಗ್ರಾಮಕ್ಕೆ ಬಂದು ತಲುಪಿತು. ಶನಿವಾರ(ಮಾ.22) ನೆಲೋಗಿಯಿಂದ ಆರಂಭಗೊಳ್ಳುವ ಪಾದಯಾತ್ರೆ ಕೂಟನೂರ-ಹಂಗರಗಿ, ಹರವಾಳ, ಸೌಳಹಳ್ಳ ಮೂಲಕ ಶಖಾಪೂರಕ್ಕೆ ತಲುಪಲಿದೆ. 23ರಂದು ಶಖಾಪುರದಲ್ಲಿ ನಡೆಯುವ ವಿಶ್ವರಾಧ್ಯರು ಹಾಗೂ ಬಸವಾಂಬೆ ತಾಯಿಯವರ ಜೋಡು ರಥೋತ್ಸವದ ಅಂಗವಾಗಿ ಬೆಳಿಗ್ಗೆ ವಿಶ್ವಾರಾಧ್ಯರ ಕತೃ ಗದ್ದುಗೆಗೆ ರುದ್ರಾಭಿಷೇಕ, ವಿಶೇಷ ಪೂಜೆ ನೆರವೇರಲಿದೆ. ಬೆಳಿಗ್ಗೆ 10 ಗಂಟೆಗೆ ಪುರಾಣ ಮಹಾಮಂಗಲವಾಗಲಿದೆ. ನಂತರ ಕಲಬುರಗಿಯ ಬಿಲ್ವ ಆಸ್ಪತ್ರೆ ವತಿಯಿಂದ ಆರೋಗ್ಯ ಉಚಿತ ತಪಾಸಣಾ ಶಿಬಿರ ಜರುಗುವುದು. ಸಂಜೆ 6 ಗಂಟೆಗೆ ಸಹಸ್ರಾರು ಭಕ್ತರ ಜಯಘೋಷದ ನಡುವೆ ಜೋಡು ರಥೋತ್ಸವ ಜರುಗಲಿದೆ. ನಂತರ ಉಜ್ಜಯನಿಯ ಗುರುಗಳ ಸಾನ್ನಿಧ್ಯದಲ್ಲಿ ಧರ್ಮಸಭೆ, ನಂತರ ವಿಶ್ವಾರಾಧ್ಯ ಮಹಾತ್ಮ ಆಧ್ಯಾತ್ಮಿಕ ನಾಟಕ ಪ್ರದರ್ಶನಗೊಳ್ಳಲಿದೆ. ಮಾರ್ಚ್ 24ರಂದು ಜಾನುವಾರು ಜಾತ್ರೆ ಹಾಗೂ ಜಂಗೀ ಕುಸ್ತಿ ನಡೆಯಲಿವೆ.

ADVERTISEMENT

ಸುರೇಶ ತಿಪಶೆಟ್ಟಿ, ರಾಜಶೇಖರ ಪಾಟೀಲ ಅವರಾದ, ದೇವಣ್ಣ ಯಂಕಂಚಿ, ಸಿದ್ರಾಮಪ್ಪಗೌಡ ಪೊಲೀಸ್ ಪಾಟೀಲ ಹರನೂರ, ಗುರುಶಾಂತಯ್ಯ ಸ್ಥಾವರಮಠ, ಭೀಮರಾಯ ಕುಂಬಾರ, ಬಸಂತ್ರಾಯಗೌಡ ಮಾಲಿಪಾಟೀಲ, ದುಂಡಪ್ಪ ಮೋದಿ, ಸಿದ್ದರಾಮ ಕೋಬಾಳ, ಮಹಾದೇವಪ್ಪ ನೀಲರಲಕೋಡ, ಮಲ್ಲುಗೌಡ ಶಖಾಪೂರ ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.