
ಜೇವರ್ಗಿ: ಯಡ್ರಾಮಿ ಹಾಗೂ ಜೇವರ್ಗಿ ತಾಲ್ಲೂಕಿನ 41 ಗ್ರಾಮ ಪಂಚಾಯಿತಿಗಳಲ್ಲಿ 15ನೇ ಹಣಕಾಸು ಯೋಜನೆಯಡಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ತನಿಖೆಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್‌ಸಿಂಗ್ ಮೀನಾ ಆದೇಶಿಸಿದ್ದಾರೆ.
ಜೇವರ್ಗಿ ತಾಲ್ಲೂಕಿನ ಆಂದೋಲಾ, ಅಂಕಲಗಾ, ಬಿರಾಳ ಬಿ., ಗಂವ್ಹಾರ, ಗುಡೂರ ಎಸ್.ಎ., ಹರನೂರ, ಹರವಾಳ, ಹಿಪ್ಪರಗಾ ಎಸ್.ಎನ್., ಹುಲ್ಲೂರ, ಇಟಗಾ, ಜೇರಟಗಿ, ಕಲ್ಲಹಂಗರಗಾ, ಕಲ್ಲೂರ ಕೆ., ಕೆಲ್ಲೂರ, ಕೋಳಕೂರ, ಕೂಡಿ, ಮದರಿ, ಮಂದೇವಾಲ, ನರಿಬೋಳ, ನೇದಲಗಿ, ನೆಲೋಗಿ, ರಂಜಣಗಿ, ಸೊನ್ನ ಮತ್ತು ಯಾಳವಾರ.
ಯಡ್ರಾಮಿ ತಾಲ್ಲೂಕಿನ ಅಲೂರ, ಅರಳಗುಂಡಗಿ, ಬಳಬಟ್ಟಿ, ಬಿಳವಾರ, ಇಜೇರಿ, ಕಾಚಾಪುರ, ಕಡಕೋಳ, ಕರಕಿಹಳ್ಳಿ, ಕುಕನೂರ, ಕುರಳಗೇರ, ಮಾಗಣಗೇರಿ, ಮಳ್ಳಿ, ಸಾಥಖೇಡ, ಸುಂಬಡ, ವಡಗೇರಾ ಮತ್ತು ಯಲಗೋಡ ಸೇರಿದಂತೆ ಒಟ್ಟು 41 ಗ್ರಾಮ ಪಂಚಾಯಿತಿಗಳಲ್ಲಿ 15ನೇ ಹಣಕಾಸು ಯೋಜನೆಯಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಕಳೆದ ನ.19ರಂದು ಸಾಮಾಜಿಕ ಹೋರಾಟಗಾರ ಈರಣ್ಣಗೌಡ ಪಾಟೀಲ ಗುಗಿಹಾಳ ಅವರು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ದೂರು ನೀಡಿದ್ದರು. ದೂರಿನ ಹಿನ್ನಲೆ 41 ಪಂಚಾಯಿತಿಗಳ ತನಿಖೆಗೆ ಜಿಲ್ಲಾ ಮಟ್ಟದ ವಿಶೇಷ ತಂಡ ರಚನೆ ಮಾಡಿ ಆದೇಶ ಹೊರಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.