- ಐಸ್ಟಾಕ್ ಚಿತ್ರ
ಆಳಂದ: ಗ್ರಾಮ ಪಂಚಾಯಿತಿ ವಿವಿಧ ಅನುದಾನ ದುರುಪಯೋಗದ ದೂರಿನ ಹಿನ್ನಲೆಯಲ್ಲಿ ಆಳಂದ ತಾಲ್ಲೂಕಿನ ನಿಂಬರ್ಗಾ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ ಐದು ಜನ ಸದಸ್ಯರ ಸದಸ್ಯತ್ವವು ರದ್ದುಗೊಂಡ ಘಟನೆ ನಡೆದಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿ ರಂದೀಪ ಡಿ ಅವರು ಆದೇಶ ಹೋರಡಿಸಿದ್ದು, ನಿಂಬರ್ಗಾ ಗ್ರಾಮದ ಸರ್ವ ಸಮಾಜ ಕಲ್ಯಾಣ ಸಮಿತಿಯ ವಿಠಲ ಕೋಣೇಕರ್ ಅವರು ನೀಡಿದ ದೂರಿನ ಹಿನ್ನಲೆಯಲ್ಲಿ ಈ ವಿಚಾರಣೆ ನಡೆಸಿದ ಅವರು ಅಧ್ಯಕ್ಷ, ಉಪಾಧ್ಯಕ್ಷ ಸೇರಿ ಸದಸ್ಯರು ಗ್ರಾಮ ಪಂಚಾಯಿತಿಯ ವಿವಿಧ ಅನುದಾನವು ಸ್ವಂತ ತಮ್ಮ ಹೆಸರಿನಲ್ಲಿ ಹಾಗೂ ಕುಟುಂಬ ಸದಸ್ಯರ ಹೆಸರಿನಲ್ಲಿ ದುರುಪಯೋಗ ಪಡೆಸಿಕೊಂಡಿರುವದು ಸಾಬೀತಾಗಿದೆ.
ಅಧ್ಯಕ್ಷೆ ರೇಖಾಬಾಯಿ ಚವ್ಹಾಣ, ಉಪಾಧ್ಯಕ್ಷ ಅಪ್ಪಾಸಾಬ ಬೊಮ್ಮನಹಳ್ಳಿ, ಸದಸ್ಯರಾದ ಕಾರ್ತಿಕ ಕುಂಬಾರ, ಸುರೇಖಾ ಸೂರ್ಯಕಾಂತ, ಸುರೇಖಾ ಸೋಮಣ್ಣಾ, ಲಲಿತಾಬಾಯಿ ಹಣಮಂತ, ಯಂಕಪ್ಪ ಬನಪಟ್ಟಿ ಅವರ ಸದಸ್ಯತ್ವ ರದ್ದುಗೊಳಿಸಲಾಗಿದೆ.
ಅಧ್ಯಕ್ಷೆ ಸೇರಿ ಈ ಎಲ್ಲ ಸದಸ್ಯರೂ ₹49,740 ಅನುದಾನವು ನಿಯಮಬಾಹಿರವಾಗಿ ದುರುಪಯೋಗ ಪಡೆಸಿಕೊಂಡಿರುತ್ತಾರೆ. ಇವರ ಸದಸ್ಯತ್ವದ ಅವಧಿಯು ಇನ್ನು ಒಂದು ತಿಂಗಳ ಮಾತ್ರ ಬಾಕಿ ಉಳಿದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.