ADVERTISEMENT

ಕೃಷಿ ಸಿಂಚಾಯಿ ಯೋಜನೆ ಪ್ರಯೋಜನ ಪಡೆಯಿರಿ: ಶಾಸಕ ಎಂ.ವೈ. ಪಾಟೀಲ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 6:12 IST
Last Updated 8 ಡಿಸೆಂಬರ್ 2025, 6:12 IST
ಅಫಜಲಪುರ ತಾಲ್ಲೂಕಿನ ಮಣ್ಣೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ  ಜಲಾನಯನ (ವಾಟರ್ ಶೆಡ್) ಮಹೋತ್ಸವ ಕಾರ್ಯಕ್ರಮವನ್ನು ಶಾಸಕ ಎಂ.ವೈ. ಪಾಟೀಲ ಉದ್ಘಾಟಿಸಿದರು
ಅಫಜಲಪುರ ತಾಲ್ಲೂಕಿನ ಮಣ್ಣೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ  ಜಲಾನಯನ (ವಾಟರ್ ಶೆಡ್) ಮಹೋತ್ಸವ ಕಾರ್ಯಕ್ರಮವನ್ನು ಶಾಸಕ ಎಂ.ವೈ. ಪಾಟೀಲ ಉದ್ಘಾಟಿಸಿದರು   

ಅಫಜಲಪುರ: ‘ಹೆಚ್ಚಿನ ಇಳುವರಿ ಪಡೆಯುವ ಕೃಷಿ ವಿಧಾನಗಳನ್ನು ಉತ್ತೇಜಿಸಲು ಕೇಂದ್ರ ಸರ್ಕಾರದಿಂದ ಜಾರಿಯಾಗಿರುವ ಯೋಜನೆಯೇ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ. ಕೃಷಿಯಲ್ಲಿ ನಾವು ಪ್ರಗತಿ ಹೊಂದಿದರೆ ಮಾತ್ರ ನಮ್ಮ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ’ ಎಂದು ಶಾಸಕ ಎಂ.ವೈ. ಪಾಟೀಲ ಹೇಳಿದರು.

ತಾಲ್ಲೂಕಿನ ಮಣ್ಣೂರ ಗ್ರಾಮದಲ್ಲಿ ಜಲಾನಯನ ಅಭಿವೃದ್ಧಿ ಘಟಕ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹಮ್ಮಿಕೊಂಡಿದ್ದ ಜಲಾನಯನ (ವಾಟರ್ ಶೆಡ್) ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿ,‘ಕೃಷಿ ಕ್ಷೇತ್ರದಲ್ಲಿ ನಾವು ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆ. ಸರ್ಕಾರ ವಿವಿಧ ಇಲಾಖೆಗಳ ಮೂಲಕ ರೈತರಿಗೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ರೈತರು ಸರ್ಕಾರ ನೀಡಿರುವ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಮದ್‌ ಪಟೇಲ್‌ ಜಲಾನಯನ ಅಭಿವೃದ್ಧಿ ಘಟಕ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹಮ್ಮಿಕೊಂಡಿದ್ದ ಜಲಾನಯನ ಕಾರ್ಯಕ್ರಮಗಳ ಪ್ರಯೋಜನ ಕುರಿತು ಮಾತನಾಡಿದರು.

ADVERTISEMENT

ಈ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ರಾಜು ಬೆನಕನಹಳ್ಳಿ, ರಾಮನಗರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಮಲಾಬಾಯಿ ಅಳ್ಳಗಿ, ಕೃಷಿ ಉಪ ನಿರ್ದೇಶಕ ಬಾಲರಾಜ ರಂಗರಾವ, ಸಹಾಯಕ ಕೃಷಿ ನಿರ್ದೇಶಕ ಎಚ್.ಎಸ್. ಗಡಗಿಮನಿ, ಸೈಫನ್‌ಸಾಬ ಮುಲ್ಲಾ, ಅರಣ್ಯ ಇಲಾಖೆಯ ಮುಜಬುದ್ದೀನ, ಕೃಷಿ ಅಧಿಕಾರಿ ಚನ್ನಬಸಯ್ಯ ಹಿರೇಮಠ, ರೈತ ಮುಖಂಡರಾದ ಮಹಾದೇವಪ್ಪ ಕರೂಟಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಪ್ರಕಾಶ ಜಮಾದಾರ, ಶಿವಾನಂದ ಗಾಡಿಸಾಹುಕಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ಪೂಜಾರಿ, ಶರಣು ಕುಂಬಾರ, ಸಿದ್ರಾಮಪ್ಪ ಹಿರೇಕುರುಬರ, ಸಿದ್ದಪ್ಪ ಹತ್ತರಕಿ, ಅಣ್ಣಾರಾವ ಮುಜಗೊಂಡ, ಜಟ್ಟೆಪ್ಪ ಭುಯ್ಯಾರ, ಷಡಕ್ಷರಿ ತಂಬಾಕೆ, ಬಸಣ್ಣ ಜಕಾಪುರ, ವಿವೇಕಾನಂದ ಕೋಗಟನೂರ, ಮಿಟ್ಟುಸಾಬ ರುಕ್ಮೋದ್ದಿನ, ಮಾಳಪ್ಪ ಪೂಜಾರಿ, ಅಭಿಷೇಕ ರೋಡಗಿ, ಸಿದ್ದಪ್ಪ ಗೋಪಗೊಂಡ, ಯಶವಂತ ಕರೂಟಿ, ಮಹಾಂತೇಶ ಕರೂಟಿ, ವೇಣುಮಾಧವ ಅವಧಾನಿ, ಸಂತೋಷ ಅಲ್ಲಾಪೂರ, ಜಗದೀಶ ದೇಶಟ್ಟಿ, ಸಂಜೀವ ನನ್ನಾಜಿ, ಮಹಿಬೂಬ ಗೌರ, ಶ್ರೀಕಾಂತ ನಿವರಗಿ, ರಾಜಶೇಖರ ಪ್ಯಾಟಿ, ಶರಣಪ್ಪ ಕರಜಗಿ, ಮಲ್ಲಿಕಾರ್ಜುನ ಕರೂಟಿ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.