ADVERTISEMENT

ಕಲಬುರಗಿ | ರಾತ್ರಿ ವೇಳೆ ಗಲಭೆ ನಿಯಂತ್ರಣಕ್ಕೆ ಒತ್ತು, ತರಬೇತಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 2:28 IST
Last Updated 18 ಜುಲೈ 2025, 2:28 IST
<div class="paragraphs"><p>ಅಲೋಕ್‌ ಕುಮಾರ್</p></div>

ಅಲೋಕ್‌ ಕುಮಾರ್

   

ಕಲಬುರಗಿ: ‘ಇತ್ತೀಚಿನ ದಿನಗಳಲ್ಲಿ ರಾತ್ರಿ ವೇಳೆಯಲ್ಲೂ ಕಾನೂನು ಸುವ್ಯವಸ್ಥೆ ರಕ್ಷಣೆ ಸಮಸ್ಯೆ ಆಗುತ್ತಿದೆ. ರಾತ್ರಿಯಲ್ಲಿ ನಡೆಯುವ ಗಲಭೆಗಳ ನಿಯಂತ್ರಿಸಲು ಸಿಬ್ಬಂದಿ ಸಜ್ಜುಗೊಳಿಸಲಾಗುತ್ತಿದೆ’ ಎಂದು ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ (ತರಬೇತಿ) ಅಲೋಕ್‌ ಕುಮಾರ್ ಗುರುವಾರ ತಿಳಿಸಿದರು .

ಮಾಧ್ಯಮಗಳ ಜೊತೆ ಮಾತನಾಡಿ, ಪ್ರಶಿಕ್ಷಣಾರ್ಥಿಗಳಿಗೆ ಸಾಮಾನ್ಯವಾಗಿಹಗಲಿನಲ್ಲಿ ತರಬೇತಿ ನೀಡಲಾಗುತ್ತದೆ ಹುಬ್ಬಳ್ಳಿ–ಧಾರವಾಡ, ಶಿವಮೊಗ್ಗ, ಮಂಡ್ಯದ ನಾಗಮಂಗಲ, ಮೈಸೂರಿನ ಉದಯಗಿರಿಯಲ್ಲಿ ರಾತ್ರಿ ವೇಳೆ ಗಲಭೆ ನಡೆದಿದ್ದವು. ಇಂಥ ಗಲಭೆಗಳ ನಿಯಂತ್ರಣವೇ ತರಬೇತಿಯ ಉದ್ದೇಶವಾಗಿದೆ ಎಂದರು.

ADVERTISEMENT

‘ಪ್ರತಿ ತಿಂಗಳ ಒಂದು ರಾತ್ರಿ 12ರಿಂದ 1ಗಂಟೆಯ ನಡುವೆ ಎಚ್ಚರಿಕೆ ಗಂಟೆ ಬಾರಿಸಲಾಗುತ್ತದೆ. ಮಲಗಿರುವ ಪ್ರಶಿಕ್ಷಣಾರ್ಥಿಗಳು ಎದ್ದು, ಸಿದ್ಧರಾಗಿ ತರಬೇತಿ ಸ್ಥಳಕ್ಕೆ ಬರುತ್ತಾರೆ. ಫೈರಿಂಗ್, ಲಾಠಿ ಚಾರ್ಚ್‌, ಗಲಭೆ ಕೋರರ ನಿಯಂತ್ರಣ ಕುರಿತು ಮೂರು ಗಂಟೆ ತರಬೇತಿ ಇರಲಿದೆ. ಪ್ರಾಯೋಗಿಕವೂ ಇರುತ್ತದೆ’ ಎಂದರು.

ಗುಂಪು ಗಲಭೆಗಳ ವೇಳೆ ಉದ್ರಿಕ್ತರನ್ನು ಕೊಲ್ಲುವುದು ಉದ್ದೇಶ ಆಗಬಾರದು. ಹೀಗಾಗಿ, ಸೊಂಟದ ಮೇಲೆ ಗುರಿ ಇರಿಸಿ ಶೂಟ್ ಮಾಡುವುದನ್ನು ನಿಲ್ಲಿಸಲಾಗಿದೆ. ಸೊಂಟದ ಕೆಳಗಡೆ ಗುರಿ ಇಟ್ಟು ಶೂಟ್ ಮಾಡುವುದನ್ನು 2025ರ ಬ್ಯಾಚ್‌ನಿಂದ ಆರಂಭಿಸಲಾಗಿದೆ. ಲಾಠಿ ಚಾರ್ಜ್‌ಗೂ ಇದೇ ನಿಯಮ ಅನ್ವಯ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.