ADVERTISEMENT

ಪಾಕ್‌ ಪರ ಘೋಷಣೆ ಕೂಗಿದವರಿಗೆ ಗುಂಡು ಹೊಡೆಯಬೇಕಿತ್ತು: ಪ್ರಮೋದ ಮುತಾಲಿಕ್

ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2020, 13:25 IST
Last Updated 17 ಫೆಬ್ರುವರಿ 2020, 13:25 IST
ಪ್ರಮೋದ್‌ ಮುತಾಲಿಕ್‌
ಪ್ರಮೋದ್‌ ಮುತಾಲಿಕ್‌   

ಕಲಬುರ್ಗಿ: ‘ಹುಬ್ಬಳ್ಳಿಯಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ ಕಾಶ್ಮೀರದ ಮೂವರು ವಿದ್ಯಾರ್ಥಿಗಳನ್ನು ಗುಂಡಿಟ್ಟು ಸಾಯಿಸಬೇಕಿತ್ತು’ ಎಂದು ಶ್ರೀರಾಮಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಾಕ್ ಪರ ಘೋಷಣೆ ಕೂಗಿದ್ದಕ್ಕೆ ದೇಶದ್ರೋಹ ಪ್ರಕರಣದಡಿ ಬಂಧಿಸಿರುವುದಾಗಿ ಅಲ್ಲಿಯ ಪೊಲೀಸ್‌ ಕಮೀಷನರ್ ಹೇಳುತ್ತಾರೆ. ನಂತರ ಯು–ಟರ್ನ್ ಹೊಡೆಯುತ್ತಾರೆ. ದೇಶದ್ರೋಹ ಕ್ಯಾನ್ಸರ್ ಇದ್ದಂತೆ. ತಕ್ಷಣ ಹತ್ತಿಕ್ಕದಿದ್ದರೆ ಇಡೀ ದೇಶಕ್ಕೇ ಹರಡುತ್ತದೆ’ ಎಂದರು.

‘ದೇಶದ್ರೋಹಿಗಳನ್ನು ಹುಬ್ಬಳ್ಳಿ ಕೋರ್ಟ್‌ಗೆ ಕರೆತಂದಾಗ, ಜನರು ಚಪ್ಪಲಿಯಿಂದ ಹೊಡೆದು ಒಳ್ಳೆಯ ಕೆಲಸ ಮಾಡಿದ್ದಾರೆ. ಚಪ್ಪಲಿ ಅಲ್ಲ, ಅವರ ಮೇಲೆ ಸಗಣಿ ಹಾಕಬೇಕಿತ್ತು. ದೇಶದ ಯಾವ ಕಾಲೇಜಿನಲ್ಲಿಯೂ ಅವರಿಗೆ ವಿದ್ಯಾಭ್ಯಾಸಕ್ಕೆ ಅವಕಾಶ ನೀಡಬಾರದು. ಮುಂಚೆ ಜಾಮೀನು ರಹಿತ ಪ್ರಕರಣ ದಾಖಲಿಸಲಾಗಿತ್ತು. ನಂತರ ಜಾಮೀನು ನೀಡಬಹುದಾದ ಸೆಕ್ಷನ್ ಹಾಕಲಾಗಿದೆ. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು, ಇಲ್ಲವೇ ಪೊಲೀಸ್ ಕಮೀಷನರ್ ದಿಲೀಪ್ ಅವರನ್ನು ಅಮಾನತು ಮಾಡಬೇಕು. ಇಲ್ಲದಿದ್ದಲ್ಲಿ ದಾಖಲೆಗಳ ಸಮೇತ ಹೈಕೋರ್ಟ್‌ ಮೊರೆ ಹೋಗುತ್ತೇವೆ’ ಎಂದುಎಚ್ಚರಿಸಿದರು.

ADVERTISEMENT

ಶಾಹೀನ್‌ ಪ್ರಕರಣ: ‘ಬೀದರ್‌ನ ಶಾಹೀನ್ ಶಾಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಏಕಾಏಕಿ ದೇಶದ್ರೋಹ ಪ್ರಕರಣ ದಾಖಲಿಸಿದ್ದು ತಪ್ಪು. ಶಿಕ್ಷಣ ಇಲಾಖೆ ಮೊದಲು ಶಾಲೆಗೆ ನೋಟಿಸ್ ನೀಡಬೇಕಿತ್ತು. ಶಿಕ್ಷಣ ಕಲಿಸುವ ಸ್ಥಳದಲ್ಲಿ ಕೋಮು ಭಾವನೆ ಕೆರಳಿಸೋದು ಸರಿಯಲ್ಲ ಅಂತ ಹೇಳಬೇಕಿತ್ತು. ತಪ್ಪೆಸಗಿದ್ದಾರೆ ಎಂಬುದು ಸಾಬೀತಾಗಿದ್ದರೆ ಸರ್ಕಾರ ಕೊಡುವ ಅನುದಾನ ನಿಲ್ಲಿಸಬೇಕಿತ್ತು. ಅದನ್ನು ಬಿಟ್ಟು ಹೀಗೆ ದೇಶದ್ರೋಹ ಪ್ರಕರಣ ದಾಖಲಿಸಿರುವುದು ಸರಿಯಲ್ಲ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.