ADVERTISEMENT

ಜೈಲಿನಲ್ಲಿ ಪಿಎಸ್ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ ಮತ್ತೆ ಕಿರಿಕ್‌

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 10:03 IST
Last Updated 28 ಡಿಸೆಂಬರ್ 2025, 10:03 IST
   

ಕಲಬುರಗಿ: ಪಿಎಸ್‌ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ಆರ್‌.ಡಿ.ಪಾಟೀಲ ಇಲ್ಲಿನ ಕೇಂದ್ರ ಕಾರಾಗೃಹದ ಸಿಬ್ಬಂದಿ ಜೊತೆಗೆ ಮತ್ತೆ ಕಿರಿಕ್‌ ಮಾಡಿಕೊಂಡಿದ್ದಾರೆ.

ಹಿರಿಯ ಅಧಿಕಾರಿಗಳ ಸೂಚನೆಯಂತೆ ಜೈಲು ಸಿಬ್ಬಂದಿ ಶನಿವಾರ ಬ್ಯಾರೆಕ್‌ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಜೈಲು ಸಿಬ್ಬಂದಿ ಜೊತೆಗೆ ತಗಾದೆ ತೆಗೆದ ಆರ್‌.ಡಿ.ಪಾಟೀಲ, ‘ನನ್ನ ಬ್ಯಾರೆಕ್ ತಪಾಸಣೆಗೆ ಅನುಮತಿ ಇದೆಯಾ?’ ಎಂದು ಪ್ರಶ್ನಿಸಿದ್ದಾನೆ. ಅನುಮತಿ ಇಲ್ಲದೇ ಬ್ಯಾರಕ್ ತಪಾಸಣೆಗೆ ಬಿಡಲ್ಲ ಎಂದು ವಾಗ್ವಾದ ನಡೆಸಿದ್ದ’ ಎಂದು ಮೂಲಗಳು ಹೇಳಿವೆ.

ಈ ಕುರಿತು ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಆರ್‌.ಅನಿತಾ ಅವರು ಫರಹತಾಬಾದ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

ADVERTISEMENT

ಇತ್ತೀಚೆಗೆ ಸುಪ್ರೀಂ ಕೋರ್ಟ್‌ನಿಂದ ಮಧ್ಯಂತರ ಜಾಮೀನು ಪಡೆದಿದ್ದ ಆರ್‌.ಡಿ.ಪಾಟೀಲ, ಜೈಲಿನಿಂದ ಬಿಡುಗಡೆಯಾಗುವ ಹೊತ್ತಲ್ಲೂ ಜೈಲಿನ ಅಧಿಕಾರಿಗಳೊಂದಿಗೆ ಕಿರಿಕ್‌ ಮಾಡಿಕೊಂಡಿದ್ದ. ಪರಸ್ಪರ ವಾಗ್ವಾದ, ನೂಕಾಟ–ತಳ್ಳಾಟ ನಡೆದಿತ್ತು. ಈ ಕುರಿತು ಜೈಲು ಅಧಿಕಾರಿಗಳು ಹಾಗೂ ಆರ್‌.ಡಿ.ಪಾಟೀಲ ಪರಸ್ಪರರ ವಿರುದ್ಧ ನೀಡಿದ ದೂರುಗಳನ್ವಯ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.