ADVERTISEMENT

ಕಲಬುರಗಿ | ಪುಟ್ಟರಾಜ ಗವಾಯಿ ಜನ್ಮದಿನ; ಸಂಗೀತ ಸಮಾರಂಭ ಇಂದು

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2025, 0:15 IST
Last Updated 3 ಮಾರ್ಚ್ 2025, 0:15 IST
ಪುಟ್ಟರಾಜ ಗವಾಯಿ
ಪುಟ್ಟರಾಜ ಗವಾಯಿ   

ಕಲಬುರಗಿ: ‘ನಗರದ ಶರಣಬಸವೇಶ್ವರ ದೇವಸ್ಥಾನ ಆವರಣದ ಅನುಭವ ಮಂಟಪದಲ್ಲಿ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳ 111ನೇ ಜನ್ಮದಿನದ ಪ್ರಯುಕ್ತ ಮಾರ್ಚ್‌ 3ರಂದು ಸಂಜೆ 5.30ಕ್ಕೆ ಸಂಗೀತ ಸಮಾರಂಭ, ಚಿರಂಜೀವಿ ದೊಡ್ಡಪ್ಪ ಅಪ್ಪ ಅವರ ತುಲಾಭಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಸಂಗೀತ ಶಿಕ್ಷಕ ಶಿವಶಂಕರ ಬಿರಾದಾರ ತಿಳಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಂಡಿತ ಪುಟ್ಟರಾಜ ಗವಾಯಿಗಳವರ ಕಲಬುರಗಿ ಶಿಷ್ಯ ಬಳಗದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಾಣ್ಯಗಳಿಂದ ದೊಡ್ಡಪ್ಪ ಅಪ್ಪ ಅವರ ತುಲಾಭಾರ ಮಾಡಲಾಗುವುದು. ದಾಕ್ಷಾಯಣಿ ಎಸ್‌. ಅಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಲ್ಯಾಣ ನಾಡಿನ ಸಾಂಸ್ಕೃತಿಕ ಕಲಾ ಬಳಗದಿಂದ ವಿಶೇಷ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಗವಾಯಿಗಳವರ ಕಲಬುರಗಿ ಶಿಷ್ಯ ಬಳಗ ಸಂಗೀತ ಸೇವೆ ನೀಡಲಿದೆ’ ಎಂದು ಅವರು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಿದ್ರಾಮಪ್ಪ ಪೊಲೀಸ್‌ ಪಾಟೀಲ, ಜಗದೀಶ ನಗನೂರ, ದತ್ತರಾಜ ಕಲಶೆಟ್ಟಿ, ಹಣಮಂತರಾವ್‌ ಮಳ್ಳಿ ಸೇರಿದಂತೆ ಹಲವರು ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.