ADVERTISEMENT

ಕಲಬುರಗಿ: ನಿವೃತ್ತ ಮುಖ್ಯ ಶಿಕ್ಷಕರಿಂದ ಶಾಲೆಗೆ ₹ 50 ಸಾವಿರ ದೇಣಿಗೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 5:47 IST
Last Updated 6 ಆಗಸ್ಟ್ 2025, 5:47 IST
ಕಲಬುರಗಿ ತಾಲ್ಲೂಕಿನ ಹತಗುಂದಾ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಹುದ್ದೆಯಿಂದ ನಿವೃತ್ತರಾದ ರಾಜಶೇಖರ ಗುಂಡದ ಅವರನ್ನು ಗುರುನಾಥ ಸ್ವಾಮೀಜಿ ಸನ್ಮಾನಿಸಿದರು
ಕಲಬುರಗಿ ತಾಲ್ಲೂಕಿನ ಹತಗುಂದಾ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಹುದ್ದೆಯಿಂದ ನಿವೃತ್ತರಾದ ರಾಜಶೇಖರ ಗುಂಡದ ಅವರನ್ನು ಗುರುನಾಥ ಸ್ವಾಮೀಜಿ ಸನ್ಮಾನಿಸಿದರು   

ಕಲಬುರಗಿ: ತಾಲ್ಲೂಕಿನ ಹತಗುಂದಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಹುದ್ದೆಯಿಂದ ನಿವೃತ್ತರಾದ ರಾಜಶೇಖರ ಅಪ್ಪಾರಾಯ ಗುಂಡದ ಅವರು ಶಾಲೆಗೆ ₹ 50 ಸಾವಿರ ದೇಣಿಗೆ ನೀಡಿದ್ದಾರೆ.

ನಿವೃತ್ತಿ ಪ್ರಯುಕ್ತ ಸೋಮವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಶಾಲೆಯ ಅಭಿವೃದ್ಧಿಗಾಗಿ ದೇಣಿಗೆ ನೀಡುವ ವಿಚಾರವನ್ನು ತಿಳಿಸಿದರು. 

ಗ್ರಾಮಸ್ಥರು ರಾಜಶೇಖರ ಅವರಿಗೆ ಚಿನ್ನದ ಕಾಣಿಕೆ ನೀಡಿ ಸನ್ಮಾನಿಸಿ ಬೀಳ್ಕೊಟ್ಟರು. ಸಾನ್ನಿಧ್ಯ ವಹಿಸಿದ್ದ ಹಿರೇಸಾವಳಗಿಯ ಗುರುನಾಥ ಸ್ವಾಮೀಜಿ ಮಾತನಾಡಿ, ‘ಉತ್ತಮ ಸಮಾಜ ಕಟ್ಟಲು ಶಿಕ್ಷಕರ ಪಾತ್ರ ಬಾಳ ಅವಶ್ಯಕತೆ ಇದೆ. ರಾಜಶೇಖರ ಅವರು ಸಾವಿರಾರು ವಿದ್ಯಾರ್ಥಿಗಳ ಬಾಳು ಬೆಳಗಿಸಿದ್ದಾರೆ’ ಎಂದರು.

ADVERTISEMENT

ಹಣಮಂತರಾಯ ಜಿ. ಗಡ್ಡ, ರವಿಚಂದ್ರ ಆರ್. ಪಟ್ಟ, ಶಾಂತಾಬಾಯಿ ಎಸ್. ಪೊಲೀಸ್ ಪಾಟೀಲ, ಲೋಹಿತ್ ಪಾಟೀಲ, ಕಾಶಿಬಾಯಿ ಪಾಟೀಲ, ರಾಜಶೇಖರ್ ಆ ಗುಡ್ಡ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.