ಕಾಳಗಿ: ಪಟ್ಟಣದ ಕಲಬುರಗಿ ರಸ್ತೆ ಮಾರ್ಗದ ಸದ್ಗುರುನಾಥ ದೇವಸ್ಥಾನದಲ್ಲಿ ಗುರುವಾರ (ಮೇ 22) ಆರಾಧನೆ ಜರುಗಲಿದೆ ಎಂದು ಸಮಿತಿ ಅಧ್ಯಕ್ಷ ಸುರೇಶ ಅಷ್ಟಗಿ ತಿಳಿಸಿದ್ದಾರೆ.
ಸಂಜೆ 4 ಗಂಟೆಗೆ ಗದ್ದುಗೆಗೆ ವಿಶೇಷ ಪೂಜೆ, ಅಭಿಷೇಕ ನೆರವೇರಲಿದೆ. 6 ಗಂಟೆಗೆ ಅರ್ಚಕ ಶರಣಪ್ಪ ಆಚಾರಿ ಮನೆಯಿಂದ ಪಲ್ಲಕ್ಕಿ ಮೆರವಣಿಗೆ ಹೊರಟು ದೇವಸ್ಥಾನ ತಲುಪಲಿದೆ.
ಬಳಿಕ 2.5ಕ್ವಿಂಟಲ್ ಮಾಲದಿ ಪ್ರಸಾದ ವಿತರಣೆ ನಡೆಯಲಿದೆ. ತದನಂತರದಲ್ಲಿ ಭಜನೆ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.