ADVERTISEMENT

ಬಜೆಟ್ ವಿಶ್ಲೇಷಣೆ | ‘ಮಹಿಳೆಯರಿಗೆ ಪೂರಕವಾದ ಬಜೆಟ್‌’

ಕಲಬುರ್ಗಿಯ ಆರ್ಥಿಕ ಶಾಸ್ತ್ರಜ್ಞೆ ಸಂಗೀತಾ ಕಟ್ಟಿಮನಿ ಅಭಿಮತ

​ಪ್ರಜಾವಾಣಿ ವಾರ್ತೆ
Published 5 ಜುಲೈ 2019, 15:31 IST
Last Updated 5 ಜುಲೈ 2019, 15:31 IST
ಪ್ರಾತಿನಿಧಿಕ ಚಿತ್ರ (ಚಿತ್ರ: ಪ್ರಶಾಂತ್ ಎಚ್‌.ಜಿ.)
ಪ್ರಾತಿನಿಧಿಕ ಚಿತ್ರ (ಚಿತ್ರ: ಪ್ರಶಾಂತ್ ಎಚ್‌.ಜಿ.)   

‘ಈ ಬಾರಿಯ ಕೇಂದ್ರ ಬಜೆಟ್ ಮಹಿಳೆಯರಿಗೆ ಪೂರಕವಾಗಿದೆ’ ಅರ್ಥಶಾಸ್ತ್ರಜ್ಞೆ ಸಂಗೀತಾ ಕಟ್ಟೀಮನಿಅವರ ಅಭಿಪ್ರಾಯ.‘ಪ್ರಜಾವಾಣಿ’ ಕಲಬುರ್ಗಿ ಕಚೇರಿಯಲ್ಲಿ ನಡೆದ ಫೇಸ್‌ಬುಕ್‌ ಲೈವ್‌ ವಿಶ್ಲೇಷಣೆಯಲ್ಲಿ ವ್ಯಕ್ತಿಪಡಿಸಿದ ಅವರ ಅಭಿಪ್ರಾಯಗಳಅಕ್ಷರ ರೂಪ ಇಲ್ಲಿದೆ.

ಕಲಬುರ್ಗಿ: ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಘೋಷಿಸಿರುವಂತೆ ಮುಂದಿನ ಎಂಟು ತಿಂಗಳಲ್ಲಿ ಎಲ್ಲವೂ ಆಗಲಿಕ್ಕಿಲ್ಲ. ಆದರೆ, ಆರ್ಥಿಕ ಅಭಿವೃದ್ಧಿ ಸಾಧಿಸುವಲ್ಲಿ ಬಜೆಟ್‌ ಯಶಸ್ವಿಯಾಗಿದೆ.

ಸ್ವಸಹಾಯ ಸಂಘಗಳಿಗೆ ಮುದ್ರಾ ಯೋಜನೆಯಡಿ ಸಬಲತೆ ಸಾಧಿಸಲು 1 ಲಕ್ಷ ಕೋಟಿ ಸಾಲ ನೀಡುವ ಘೋಷಣೆ ಮಾಡಿರುವುದು ಸ್ವಾಗತಾರ್ಹ. ‘ನಾರಿ ಟು ನಾರಾಯಣಿ’ ಘೋಷಣೆ ಮೂಲಕ ಅಡುಗೆ ಮನೆಯಲ್ಲಿದ್ದ ಮಹಿಳೆಯರನ್ನು ಉದ್ಯೋಗಸ್ಥರನ್ನಾಗಿ ಮಾಡುವ ಗುರಿ ಹೊಂದಿರುವುದು ಉತ್ತಮ ಬೆಳವಣಿಗೆ. ಭಾರತದಲ್ಲಿ ಒಟ್ಟು ಉದ್ಯೋಗಸ್ಥರ ಪೈಕಿ ಶೇ 23.3ರಷ್ಟು ಮಾತ್ರ ಮಹಿಳೆಯರಿದ್ದಾರೆ.

ADVERTISEMENT
ಪ್ರೊ. ಸಂಗೀತಾ ಕಟ್ಟಿಮನಿ

ರೈತರನ್ನು ವಿದ್ಯುತ್‌ ವಿಚಾರಕ್ಕೆ ಸಂಬಂಧಿಸಿದಂತೆ ಸ್ವಾವಲಂಬಿಯಾಗಿಸುವ ಅನ್ನದಾತ ಊರ್ಜಾದಾತ ಯೋಜನೆಯ ಅನುಷ್ಠಾನದ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ. ತನ್ನ ಬೆಳೆಗಳಿಗೆ ನೀರುಣಿಸಲು ಅಗತ್ಯವಾದಷ್ಟು ವಿದ್ಯುತ್‌ ಬಳಸಿಕೊಂಡು ಮಿಕ್ಕದ್ದನ್ನು ಸರ್ಕಾರಕ್ಕೇ ಮಾರಾಟ ಮಾಡಬಹುದಾಗಿದೆ. ಇದು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬಂದರೆ ಹೊಸ ದಿಕ್ಕು ಸಿಕ್ಕಂತಾಗುತ್ತದೆ.

45 ವರ್ಷಗಳಲ್ಲೇ ಅತ್ಯಂತ ಹೆಚ್ಚು ನಿರುದ್ಯೋಗ ಪ್ರಮಾಣವಿದೆ ಎಂದು ಎನ್‌ಎಸ್‌ಎಸ್‌ಒ ಸಂಸ್ಥೆ ವರದಿ ನೀಡಿತ್ತು. ಅದನ್ನು ಗಂಭೀರವಾಗಿ ಪರಿಗಣಿಸಿ ಉದ್ಯೋಗ ಸೃಷ್ಟಿಗೆ ಹೆಚ್ಚು ಒತ್ತು ನೀಡಬೇಕಿತ್ತು.

ಮಹಿಳೆರ ಬಳಿ ಹಣವಿದ್ದರೆ ಮೊದಲು ಅವರು ಬಂಗಾರ ಖರೀದಿ ಮಾಡುತ್ತಾರೆ. ಬಜೆಟ್‌ನಲ್ಲಿ ಬಂಗಾರದ ಬೆಲೆಯನ್ನು ಹೆಚ್ಚಿಸಲು ನಿರ್ಧರಿಸಿದ್ದು ಮಹಿಳೆಯರ ಪರವಾದ ಉತ್ತಮ ನಿರ್ಣಯ ಆಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.