ADVERTISEMENT

ಕಲಬುರಗಿ: ಎಸ್‌ಬಿಆರ್‌ ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 6:39 IST
Last Updated 21 ನವೆಂಬರ್ 2025, 6:39 IST
ಕಲಬುರಗಿಯ ಸೂಪರ್‌ ಮಾರ್ಕೆಟ್‌ನಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ನಡೆದ ಜಿಲ್ಲಾಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ತೋರಿ ವಿಭಾಗಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳೊಂದಿಗೆ ಪ್ರಾಧ್ಯಾಪಕರು
ಕಲಬುರಗಿಯ ಸೂಪರ್‌ ಮಾರ್ಕೆಟ್‌ನಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ನಡೆದ ಜಿಲ್ಲಾಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ತೋರಿ ವಿಭಾಗಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳೊಂದಿಗೆ ಪ್ರಾಧ್ಯಾಪಕರು   

ಕಲಬುರಗಿ: ನಗರದ ಸೂಪರ್‌ ಮಾರ್ಕೆಟ್‌ನಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಪಿಯುಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೆಯಲ್ಲಿ ಎಸ್‌ಬಿಆರ್ ಕಾಲೇಜಿನ ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿಭಾಗ ಮಟ್ಟದ ಸ್ಪರ್ಧೆ ಬೀದರ್‌ನಲ್ಲಿ ನಡೆಯಲಿದೆ.

ಪ್ರಥಮ ಪಿಯು

  • ಚರ್ಚಾ ಸ್ಪರ್ಧೆ–ಸಂಪದಾ ರೇವತಗಾಂವ(ಕನ್ನಡ) ಪ್ರಥಮ, ನಿಧಿ ಸಜ್ಜನಶೆಟ್ಟಿ(ಇಂಗ್ಲಿಷ)-ಪ್ರಥಮ

    ADVERTISEMENT
  • ಪ್ರಬಂಧ ಸ್ಪರ್ಧೆ– ನೇತ್ರಾ ಜಡಿ(ಕನ್ನಡ) ಪ್ರಥಮ, ಮಹಾಲಕ್ಷ್ಮೀ ಆರ್.ಪಿ. ದ್ವಿತಿಯ

  • ಜಾನಪದ ಗೀತೆ– ಸೌಮ್ಯಾ ಬೇಮಳಗಿ ಪ್ರಥಮ

  • ಏಕಪಾತ್ರ ಅಭಿನಯ–ಗೌತಮಿ ಮುದ್ಗಲ್ ಪ್ರಥಮ

  • ಚಿತ್ರಕಲೆ–ಶ್ರೇಯಾ ಡಿ.ಎಸ್.(ಫೈನ್ ಆರ್ಟ್ಸ್‌) ಪ್ರಥಮ

  • ವಿಜ್ಞಾನ ಮಾದರಿ ತಯಾರಿಕೆ–ಆಯೆಷಾ ತೆಹರೀನ್ ಪ್ರಥಮ

  • ರಸಪ್ರಶ್ನೆ(ಸಾಮಾನ್ಯ ಜ್ಞಾನ)– ಪೃಥ್ವಿ ಬಸರೆಡ್ಡಿ, ಮಂಜುನಾಥ ರೆಡ್ಡಿ ಪ್ರಥಮ

  • ಭಾವಗೀತೆ– ಶರಧಿ ಕುಲಕರ್ಣಿ ದ್ವಿತಿಯ ಸ್ಥಾನ ಪಡೆದಿದ್ದಾರೆ.

ದ್ವಿತೀಯ ಪಿಯು

  • ವಿಜ್ಞಾನ ಮಾದರಿ ತಯಾರಿಕೆ–ಸತೀಶ ಚವ್ಹಾಣ ಪ್ರಥಮ

  • ಜಾನಪದ ನೃತ್ಯ–ಐಶ್ವರ್ಯ ಹೊನಗುಂಟಿ ಪ್ರಥಮ

  • ರಸಪ್ರಶ್ನೆ(ಸಾಮಾನ್ಯ ಜ್ಞಾನ)–ಹರ್ಷವರ್ಧನ ಯಾದವ, ಸುಮೇದ ಪುರಾಣಿಕ ಪ್ರಥಮ

  • ಚರ್ಚಾ ಸ್ಪರ್ಧೆ–ಅಲಿವಾ ದೀಪ್ತಿ(ಇಂಗ್ಲಿಷ) ದ್ವಿತೀಯ

  • ಜಾನಪದ ಗೀತೆ–ವೈಷ್ಣವಿ ಪಾಟೀಲ ದ್ವಿತೀಯ

  • ಏಕಪಾತ್ರ ಅಭಿನಯ–ವರ್ಷಿಣಿ ಶೀಲವಂತರ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಸಂಸ್ಥೆಯ ಅಧ್ಯಕ್ಷೆ ದಾಕ್ಷಾಯಣಿ ಅಪ್ಪಾ, 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ, ಸಂಸ್ಥೆಯ ಕಾರ್ಯದರ್ಶಿ ಬಸವರಾಜ ದೇಶಮುಖ, ಕಾಲೇಜಿನ ಪ್ರಾಚಾರ್ಯ ಎನ್.ಎಸ್. ದೇವರಕಲ್, ಮೇಲ್ವಿಚಾರಕ ಶ್ರೀಶೈಲ ಹೊಗಾಡೆ, ಪ್ರಾಧ್ಯಾಪಕರು ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.