ADVERTISEMENT

ಸೇಡಂ: ಬೆಳೆಗೆ ಜೀವಕಳೆ ತಂದ ಮಳೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2023, 16:50 IST
Last Updated 3 ಸೆಪ್ಟೆಂಬರ್ 2023, 16:50 IST
ಸೇಡಂ ಪಟ್ಟಣದ ಕಮಲಾವತಿ ನದಿಯ ಸೇತುವೆ ಮೇಲೆ ನೀರು ಹರಿಯಿತು
ಸೇಡಂ ಪಟ್ಟಣದ ಕಮಲಾವತಿ ನದಿಯ ಸೇತುವೆ ಮೇಲೆ ನೀರು ಹರಿಯಿತು   

ಸೇಡಂ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಶನಿವಾರ ಉತ್ತಮ ಮಳೆಯಾಗಿದ್ದು, ತೊಗರಿ ಬೆಳೆಗೆ ಜೀವಕಳೆ ತಂದಂತಾಗಿದೆ.

ಶನಿವಾರ ರಾತ್ರಿಯಿಡಿ ಮಳೆ ಗುಡುಗು ಮಿಂಚಿನೊಂದಿಗೆ ಸುರಿಯಿತು. ಭಾನುವಾರ ಬೆಳಿಗ್ಗೆ 10 ಗಂಟೆವರೆಗೆ ಸುರಿದಿದ್ದು, ನಂತರ ಮೋಡ ವಾತಾವರಣ ದಿನವಿಡಿ ಕವಿದಿತ್ತು. ಕಮಲಾವತಿ ನದಿ ತುಂಬಿ ಹರಿಯಿತು. ತಾಲ್ಲೂಕಿನ ಮಳಖೇಡ, ಕೋಡ್ಲಾ, ಕೋಲ್ಕುಂದಾ, ಮುಧೋಳ, ಮದನಾ, ಲಿಂಗಂಪಲ್ಲಿ, ಕುರಕುಂಟಾ, ಕಡಚರ್ಲಾ, ಆಡಕಿ, ಊಡಗಿ, ಗುಂಡೆಪಲ್ಲಿ, ಹಂದರಕಿ, ಗೌಡನಹಳ್ಳಿ, ದುಗನೂರ, ಮೀನಬಾಹಾಳ, ತೆಲ್ಕೂರ, ಇಟಕಾಲ್, ಕಾನಗಡ್ಡಾದಲ್ಲಿ ಮಳೆಯಾಗಿದೆ. ತಾಲ್ಲೂಕಿನ ಕಾಗಿಣಾ ನದಿ ಒಡಲು ತುಂಬಿ ಹರಿಯಿತು. ಹೊಲಗದ್ದೆಗಳಲ್ಲಿ ನೀರು ಹರಿದಿದೆ. ಒಣಗುವ ಹಂತದಲ್ಲಿದ್ದ ಬೆಳೆಗಳಿಗೆ ಜೀವಕಳೆ ಬಂದಂತಾಗಿದೆ.

ಸೇಡಂ 97 ಮಿ.ಮೀ, ಆಡಕಿ, 41 ಮಿ.ಮೀ, ಮುಧೋಳ 87 ಮಿ.ಮೀ, ಕೋಡ್ಲಾ 81 ಮಿ.ಮೀ ಮತ್ತು ಕೋಲ್ಕುಂದಾ 98.4 ಮಿ.ಮೀ ಮಳೆಯಾಗಿದೆ’ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.