
ಚಿತ್ತಾಪುರ: ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಶರಣಬಸವಪ್ಪ ಅಪ್ಪ ಅವರ ನಿಧನ ಹಿನ್ನೆಲೆ ಪಟ್ಟಣದ ಶರಣಬಸವೇಶ್ವರ ದೇವಾಲಯದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕದಿಂದ ಶುಕ್ರವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ ಭಂಕಲಗಿ ಮಾತನಾಡಿ, ‘ಶರಣಬಸವಪ್ಪ ಅಪ್ಪ ಅವರು ಕಲ್ಯಾಣ ಕರ್ನಾಟಕ ಭಾಗಕ್ಕೆ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕವಾಗಿ ಅಪಾರ ಕೊಡುಗೆ ನೀಡಿದ್ದಾರೆ. ಅವರ ಸೇವೆ ನಿತ್ಯ ಸ್ಮರಣೀಯ’ ಎಂದರು.
‘ದಾಸೋಹ ತತ್ವದಡಿ ಅನ್ನ ದಾಸೋಹ, ಅಕ್ಷರ ದಾಸೋಹ, ಜ್ಞಾನ ದಾಸೋಹದ ಮೂಲಕ ಸಮಾಜದ ಬದಲಾವಣೆಗೆ ಅವರು ಸಲ್ಲಿಸಿದ ಸೇವೆ ಮಾದರಿಯಾಗಿದೆ’ ಎಂದರು.
ಮುಖಂಡರಾದ ಮಲ್ಲರೆಡ್ಡಿ ಗೋಪಸೇನ್, ಅಶೋಕ ನಿಪ್ಪಾಣಿ, ನಾಗರೆಡ್ಡಿ ಗೋಪಸೇನ್, ವೀರಣ್ಣಾ ಸುಲ್ತಾನಪುರ, ಅನೀಲ ವಡ್ಡಡಗಿ, ಶ್ರೀನಿವಾಸರೆಡ್ಡಿ ಪಾಲಪ್, ಆನಂದ ಪಾಟೀಲ ನರಿಬೋಳ, ಮಲ್ಲಿಕಾರ್ಜುನರೆಡ್ಡಿ ಇಜಾರ, ಕೋಟೇಶ್ವರ ರೇಷ್ಮಿ, ಸುವನ ರೆಡ್ಡಿ, ಶಾಂತಕುಮಾರ ಹತ್ತಿ, ಮಹೇಶ ಬಟಗಿರಿ, ಶಿವರಾಜ ಪಾಳೇದ್, ಮಲ್ಲಿಕಾರ್ಜುನಗೌಡ ಆಲೂರ, ವೀರಭದ್ರಪ್ಪಾ ಗುರುಮಠಕಲ್, ಎಸ್.ಎನ್ ಪಾಟೀಲ್, ಚಂದ್ರಶೇಖರ ಉಟಗೂರ, ಜಗದೇವ ದಿಗ್ಗಾಂವಕರ್, ಗುರುಲಿಂಗಯ್ಯ ಸ್ವಾಮಿ ಸೇರಿದಂತೆ ಅನೇಕರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.