ADVERTISEMENT

ಆಶಾ ಕಾರ್ಯಕರ್ತೆಯರಿಗೆ ಸ್ಟೀಮರ್‌ ಯಂತ್ರ

​ಪ್ರಜಾವಾಣಿ ವಾರ್ತೆ
Published 13 ಜೂನ್ 2021, 3:42 IST
Last Updated 13 ಜೂನ್ 2021, 3:42 IST
ಕಲಬುರ್ಗಿಯಲ್ಲಿ ಆಶಾ ಕಾರ್ಯಕರ್ತೆಯರಿಗೆ ವಿಶ್ವಜ್ಯೋತಿ ಪ್ರತಿಷ್ಠಾನದಿಂದ ಸ್ಟೀಮರ್‌ ಯಂತ್ರಗಳನ್ನು ವಿತರಿಸಲಾಯಿತು
ಕಲಬುರ್ಗಿಯಲ್ಲಿ ಆಶಾ ಕಾರ್ಯಕರ್ತೆಯರಿಗೆ ವಿಶ್ವಜ್ಯೋತಿ ಪ್ರತಿಷ್ಠಾನದಿಂದ ಸ್ಟೀಮರ್‌ ಯಂತ್ರಗಳನ್ನು ವಿತರಿಸಲಾಯಿತು   

ಕಲಬುರ್ಗಿ: ವಿಶ್ವಜ್ಯೋತಿ ಪ್ರತಿಷ್ಠಾನದ 13ನೇ ವರ್ಷಾಚರಣೆ ಅಂಗವಾಗಿ ಕ್ರಿಯಾಶೀಲ ಗೆಳೆಯರ ಬಳಗದ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಶುಕ್ರವಾರ ಸ್ಟೀಮರ್‌ ಮಷಿನ್‌ಗಳನ್ನು ನೀಡಲಾಯಿತು.

ಪ್ರತಿಷ್ಠಾನದ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ‘ಕೊರೊನಾ ವೈರಾಣು ವಿರುದ್ಧ ಯೋಧರಂತೆ ಹೋರಾಡುತ್ತಿರುವ ಆಶಾ ಕಾರ್ಯಕರ್ತೆಯರ ಸೇವೆ ಪ್ರಶಂಸನೀಯ. ಅವರು ನಮ್ಮ ಆರೋಗ್ಯ ಕಾಳಜಿಗಾಗಿ ಹೋರಾಡುತ್ತಿದ್ದಾರೆ. ನಾವು ಅವರ ಆರೋಗ್ಯದ ಬಗ್ಗೆ ಗಮನ ಹರಿಸಬೇಕಾಗಿದೆ. ಹಾಗಾಗಿ, ಸ್ಟೀಮರ್‌ ಯಂತ್ರ, ಸ್ಯಾನಿಟೈಸರ್ ಮುಂತಾದ ಸಲಕರಣೆಗಳನ್ನು ವಿತರಿಸಲಾಗುತ್ತಿದೆ’ ಎಂದರು.

ಬಳಗದ ಮುಖಂಡರಾದ ಶರಣರಾಜ್ ಛಪ್ಪರಬಂದಿ, ಕಲ್ಯಾಣಕುಮಾರ ಶೀಲವಂತ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭವನಿಸಿಂಗ್ ಠಾಕೂರ, ಡಾ.ಬಾಬುರಾವ್‌ ಚವ್ಹಾಣ, ಪ್ರಮುಖರಾದ ಸಂದೇಶ ಕಮಕನೂರ, ರವೀಂದ್ರಕುಮಾರ ಭಂಟನಳ್ಳಿ, ಪ್ರಭುಲಿಂಗ ಮೂಲಗೆ, ಸುರೇಶ ಬಡಿಗೇರ, ಮಂಜುನಾಥ ಕಂಬಳಿಮಠ, ಜಗದೀಶ ಮರಪಳ್ಳಿ, ಅಶ್ವಿನಿ ಹಡಪದ, ಪೂರ್ಣಿಮಾ ಜಾನೆ, ವಿಶಾಲಾಕ್ಷಿ ದೇಸಾಯಿ, ಶಿವರಾಜ್ ಅಂಡಗಿ, ಎಸ್.ಎಂ.ಪಟ್ಟಣಕರ್, ಎಂ.ಎಸ್.ಪಾಟೀಲ ನರಿಬೋಳ, ಪ್ರೊ.ಯಶ್ವಂತರಾಯ ಅಷ್ಟಗಿ, ಮಾಲಾ ಕಣ್ಣಿ, ಮಾಲಾ ದಣ್ಣೂರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ADVERTISEMENT

ಪೌಷ್ಟಿಕಾಂಶ ಪುಡಿ ವಿತರಣೆ: ವಾರ್ಷಿಕೋತ್ಸವ ಅಂಗವಾಗಿ ಶನಿವಾರ ಕೂಡ ಕ್ಷಯರೋಗಿಗಳಿಗೆ ಪೌಷ್ಟಿಕಾಂಶ ಪುಡಿ ವಿತರಿಸಲಾಯಿತು.

ಸಂಶೋಧಕ ಮುಡುಬಿ ಗುಂಡೇರಾವ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ, ಆರೋಗ್ಯ ಇಲಾಖೆಯ ಮಂಜುನಾಥ ಕಂಬಳಿಮಠ, ಸಂತೋಷ ಕುಡ್ಡಳ್ಳಿ ಕಾಳಗಿ, ಶರಣರಾಜ್ ಛಪ್ಪರಬಂದಿ, ಶಿವಾನಂದ ಮಠಪತಿ, ಪ್ರಬುಲಿಂಗ ಮೂಲಗೆ, ರವೀಂದ್ರಕುಮಾರ ಭಂಟನಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.