ADVERTISEMENT

ತೀಸ್ತಾ ಬಂಧನ ಖಂಡನೀಯ: ಎಚ್.ವಿ.ದಿವಾಕರ್

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 14:35 IST
Last Updated 26 ಜೂನ್ 2022, 14:35 IST
ಎಚ್.ವಿ. ದಿವಾಕರ
ಎಚ್.ವಿ. ದಿವಾಕರ   

ಕಲಬುರಗಿ: ‘ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್‌ವಾಡ್‌ ಅವರನ್ನು ಗುಜರಾತ್‌ ಭಯೋತ್ಪಾದನೆ ನಿಗ್ರಹ ದಳವು (ಎಟಿಎಸ್‌) ವಶಕ್ಕೆ ಪಡೆದುಕೊಂಡಿರುವುದು ಖಂಡನೀಯ’ ಎಂದು ಸೋಷಲಿಸ್ಟ್‌ ಯುನಿಟಿ ಸೆಂಟರ್‌ ಆಪ್‌ ಇಂಡಿಯಾ (ಎಸ್‌ಯುಸಿಐ) ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ವಿ.ದಿವಾಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಗುಜರಾತಿನಲ್ಲಿ ಈ ಹಿಂದೆ ನಡೆದ ಗಲಭೆ ಪ್ರಕರಣಗಳಲ್ಲಿ ನರೇಂದ್ರ ಮೋದಿ ಅವರು ನಿರಾಪರಾಧಿ ಎಂದು ನ್ಯಾಯಾಲಯ ಅವರನ್ನು ಖುಲಾಸೆ ಮಾಡಿದೆಯಾದರೂ, ದೇಶದ ಜನರ ಆತ್ಮಸಾಕ್ಷಿ ನ್ಯಾಯಾಲಯದಲ್ಲಿ ಮೋದಿಯವರು ಎಂದಿಗೂ ಅಪರಾಧಿ ಸ್ಥಾನದಲ್ಲಿಯೇ ಉಳಿಯಲಿದ್ದಾರೆ‘ ಎಂದಿದ್ದಾರೆ.

‘ಸೇಡಿನ ಕ್ರಮವಾಗಿ ಗುಜರಾತ್ ಬಿಜೆಪಿ ಸರ್ಕಾರವು ಮಾನವ ಹಕ್ಕುಗಳ ಹೋರಾಟಗಾರರಾದ ತೀಸ್ತಾ ಸೆಟಲ್‌ವಾಡ್‌ ಮತ್ತಿತರನ್ನು ಅಕ್ರಮವಾಗಿ ಬಂಧಿಸಿರುವುದು ಸರಿಯಲ್ಲ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.