ADVERTISEMENT

ತಡಕಲ: ಗ್ರಾ.ಪಂ ಸಾಮಾನ್ಯ ಸಭೆ ರದ್ದು

ಅಧ್ಯಕ್ಷ, ಉಪಾಧ್ಯಕ್ಷ ಸೇರಿ 13 ಸದಸ್ಯರು ಗೈರು

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 4:55 IST
Last Updated 12 ಜನವರಿ 2022, 4:55 IST
ಆಳಂದ ತಾಲ್ಲೂಕಿನ ತಡಕಲ ಗ್ರಾ.ಪಂ ಕಚೇರಿಯಲ್ಲಿ ಸಾಮಾನ್ಯ ಸಭೆಯಲ್ಲಿ 6 ಜನ ಸದಸ್ಯರು ಹಾಜರಿದ್ದರು
ಆಳಂದ ತಾಲ್ಲೂಕಿನ ತಡಕಲ ಗ್ರಾ.ಪಂ ಕಚೇರಿಯಲ್ಲಿ ಸಾಮಾನ್ಯ ಸಭೆಯಲ್ಲಿ 6 ಜನ ಸದಸ್ಯರು ಹಾಜರಿದ್ದರು   

ಆಳಂದ: ತಾಲ್ಲೂಕಿನ ತಡಕಲ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ಕರೆದಿದ್ದ ಸದಸ್ಯರ ಸಾಮಾನ್ಯ ಸಭೆ ರದ್ದಾಗಿದೆ.

ಪಿಡಿಒ ಅವರು ಮಂಗಳವಾರಕರೆದಿದ್ದ ಸಭೆಯಲ್ಲಿ ಅಧ್ಯಕ್ಷ ಸೇರಿ 13 ಜನ ಸದಸ್ಯರ ಗೈರಾಗಿದ್ದರಿಂದ ಸಭೆಯು ರದ್ದುಪಡಿಸಲಾಗಿದೆ. ಒಟ್ಟು 19 ಸದಸ್ಯ ಬಲದ ಪಂಚಾಯಿತಿಯಲ್ಲಿ ಇಂದಿನ ಸಭೆಗೆ 6 ಜನ ಸದಸ್ಯರು ಮಾತ್ರ ಹಾಜರಿದ್ದರು.

ಎಲ್ಲ ಸದಸ್ಯರಿಗೂ ನೋಟಿಸ್ ಕಳುಹಿಸಿ ಕೊಡಲಾಗಿತ್ತು. ಸಭೆಯಲ್ಲಿ 15ನೇ ಹಣಕಾಸು ಯೋಜನೆ ಕುರಿತು ಹಾಗೂ ಗ್ರಾಮ ಪಂಚಾಯಿತಿಯ ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚೆ ವಿಷಯಗಳಿದ್ದವು.

ADVERTISEMENT

ಪಿಡಿಒ ಹಾಗೂ ಹಾಜರಿದ್ದ ಸದಸ್ಯರು, ಅಧ್ಯಕ್ಷೆ ಮತ್ತು ಉಪಾಧ್ಯಕ್ಷರು ಹಾಗೂ ಉಳಿದ ಸದಸ್ಯರಿಗಾಗಿ ಕಾದು ಕುಳಿತರು. ತಡವಾದರೂ ಸಭೆಗೆ ಹಾಜರಾಗಿದ್ದ ಕಾರಣ ಪಿಡಿಒ ಮೊಬೈಲ್ ಮೂಲಕ ಸಂಪರ್ಕಿಸಿದರೂ ಸಹ ಹಾಜರಾಗಲಿಲ್ಲ. ಅಂತಿಮವಾಗಿ ಪಿಡಿಒ ಪಾರ್ವತಿ ಅವರು ಕೋರಂ ಕೊರತೆ ಕಾರಣದಿಂದ ಸಭೆ ಮುಂದೂಡಿದರು.

ಸಭೆಯಲ್ಲಿ ಹಾಜರಿದ್ದ ಸದಸ್ಯರಾದ ನಾಗೇಂದ್ರ ತಾಂಬೆ, ಮಹಾನಂದ ತುಕಾಣೆ, ವಿಶ್ವನಾಥ ಪವಾಡಶೆಟ್ಟಿ, ಶರಣಪ್ಪ ಜಮದಾರಮ ಬಸವರಾಜ ಬೆಳಮಗಿ, ಪಾರ್ವತಿ ಎನ್ ತಾಂಬೆ ಅವರು ‘ಕಳೆದ ಒಂದು ವರ್ಷದಿಂದ ಸಾಮಾನ್ಯ ಸಭೆ ನಡೆಸುತ್ತಿಲ್ಲ, ಸಭೆ ಕರೆಯದೆ, ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚೆ ಕೈಗೊಳ್ಳದೆ ಪಂಚಾಯಿತಿ ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಂಚಾಯಿತಿಯಲ್ಲಿ ತಾರತಮ್ಯ ಮಾಡುತ್ತಿದ್ದ ಕೆಲ ಸದಸ್ಯರ ವಾರ್ಡ್‌ಗಳ ಸಮಸ್ಯೆಗೆ ಸ್ಪಂದಿಸುತ್ತಿಲ್ಲ, ಈ ಸಂಬಂಧ ಜಿ. ಪಂ ಸಿಇಒ ಅವರಿಗೆ ಮನವಿ ಸಲ್ಲಿಸಿ ತಡಕಲ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರು ಸತತ ಸಭೆಗೆ ಹಾಜರಾಗದೇ ಅಗೌರವ ತೋರಿಸುತ್ತಿದ್ದಾರೆ, ಇದರಿಂದ ಅಭಿವೃದ್ದಿ ಕಾರ್ಯಗಳಿಗೆ ಅಡ್ಡಿಯಾಗಿದೆ ಎಂದು ದೂರು ಸಲ್ಲಿಸಿ ಅಗತ್ಯ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದು ನಾಗೇಂದ್ರ ತಾಂಬೆ, ವಿಶ್ವನಾಥ ಪವಾಡಶೆಟ್ಟಿ
ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.