ADVERTISEMENT

ರೈತನ ಮಗಳು ಶೇ 88ರಷ್ಟು ಅಂಕ

​ಪ್ರಜಾವಾಣಿ ವಾರ್ತೆ
Published 6 ಮೇ 2025, 13:50 IST
Last Updated 6 ಮೇ 2025, 13:50 IST
ಅಶ್ವಿನಿ ಬಿರಾದಾರ
ಅಶ್ವಿನಿ ಬಿರಾದಾರ   

ವಾಡಿ: ರೈತನ ಪುತ್ರಿಯೊಬ್ಬಳು ಈ ಬಾರಿಯ ಎಸ್‌ಎಸ್‌ಎಲ್‌ಸಿಯಲ್ಲಿ ಡಿಸ್ಟಿಂಕ್ಷನ್ ಪಡೆಯುವುದರ ಮೂಲಕ ಗಮನಾರ್ಹ ಸಾಧನೆ ಮಾಡಿ ಮಾದರಿಯಾಗಿದ್ದಾರೆ.

ಜೇವರ್ಗಿ ತಾಲ್ಲೂಕಿನ ರಾಜೋಳ ಗ್ರಾಮದ ಕೃಷಿಕ ವಿಶ್ವನಾಥ ಬಿರಾದಾರ ಅವರ ಪುತ್ರಿ ಅಶ್ವಿನಿ ಲಾಡ್ಲಾಪುರ ಸೋದರಮಾವ ಬಸವರಾಜ ಎಣ್ಣಿ ಮನೆಯಲ್ಲಿ ನೆಲೆಸಿ ಅಭ್ಯಾಸ ಮುಂದುವರಿಸಿದ್ದರು. ಲಾಡ್ಲಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಅಭ್ಯಾಸ ಮಾಡಿ ಶೇ 88.32ರಷ್ಟು ಅಂಕ ಪಡೆದು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT