
ಕಮಲಾಪುರ: ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಸಗಟು ಕಿರಾಣಿ ಅಂಗಡಿ ಹಾಗೂ ಎರಡು ಚಿನ್ನಾಭರಣ ಮಳಿಗೆಗಳ ಶೆಟರ್ ಎತ್ತಿ ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ ಘಟನೆ ಶನಿವಾರ ರಾತ್ರಿ ನಡೆದಿದೆ. ಕಳ್ಳತನದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಸಿದ್ದು ಕಶೆಟ್ಟಿ ಅವರ ಸಗಟು ಕಿರಾಣಿ ಅಂಗಡಿಯಲ್ಲಿದ್ದ ₹ 30 ಸಾವಿರ, ಓಂ. ಚಂದ್ರಕಾಂತ ಜಾಧವ ಅವರಿಗೆ ಸೇರಿದ ಜ್ಯುವೆಲರಿ ಮಳಿಗೆಯಲ್ಲಿ 3 ಗ್ರಾಂ. ಬಂಗಾರ, 150 ಗ್ರಾಂ. ಬೆಳ್ಳಿ ಸೇರಿ ಸುಮಾರು ₹ 30 ಸಾವಿರ ಮೌಲ್ಯದ ಚಿನ್ನಾಭರಣ ಹಾಗೂ ಜೈಭವಾನಿ ಚಿನ್ನಾಭರಣ ಅಂಗಡಿಯಲ್ಲಿ ₹ 2,000 ಕಳುವು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದುಷ್ಕರ್ಮಿಗಳು ಅಂಗಡಿಗಳ ಶೆಟರ್ ಬೀಗ ಮುರಿದು, ಮಳಿಗೆಗಳಲ್ಲಿ ಕಳವು ಮಾಡಿದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಕಮಲಾಪುರ ಠಾಣೆಯ ಪೊಲೀಸರು ಶ್ವಾನಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.