ಕಲಬುರಗಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಶತಮಾನೋತ್ಸವ ಅಭಿಯಾನದ ಅಂಗವಾಗಿ ವಾಜಪೇಯಿ ಅವರೊಂದಿಗೆ ಪಕ್ಷ ಸಂಘಟನೆಯಲ್ಲಿ ತೊಡಗಿದ್ದ, ಒಡನಾಟ ಹೊಂದಿದ ಹಿರಿಯರಾದ ದೇವರಾವ ದೇಶಮುಖ ಅವರನ್ನು ಬಿಜೆಪಿ ನಗರ ಜಿಲ್ಲಾ ಅಧ್ಯಕ್ಷ ಚಂದು ಪಾಟೀಲ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಸನ್ಮಾನಿಸಿದರು.
ಪಕ್ಷದ ಆರಂಭಿಕ ಕಾಲಘಟ್ಟದ ಕುರಿತು ಚರ್ಚಿಸಿ, ಮಾಹಿತಿ ಪಡೆದುಕೊಂಡರು. ಅಭಿಯಾನದ ನಿಮಿತ್ತ ಬಿಜೆಪಿ ಮಹಾನಗರ ಘಟಕದ ವತಿಯಿಂದ ವಾಜಪೇಯಿ ಅವರ ಒಡನಾಡಿಗಳಾಗಿದ್ದ ದಿ.ಮನೋಹರ್ ಧಮ್ಮೂರಕರ್, ದಿ.ಮಹಾಂತ ಗೌಡ ಪಾಟೀಲ ಅವರ ಮನೆಗೆ ಭೇಟಿ ನೀಡಿ, ಕುಟುಂಬದವರನ್ನು ಸನ್ಮಾನಿಸಿ, ಕುಶಲೋಪರಿ ವಿಚಾರಿಸಿದರು.
ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಉಮೇಶ ಪಾಟೀಲ, ಮಹಾದೇವ ಬೆಳಮಗಿ, ದಯಾಘನ ಧಾರವಾಡಕರ್, ಶ್ರೀನಿವಾಸ ದೇಸಾಯಿ, ಅರವಿಂದ ನವಲಿ, ಪ್ರಹ್ಲಾದ ಪೂಜಾರಿ, ರಾಮಚಂದ್ರ ಗುಮ್ಮಟ, ಸಂಗಮೇಶ ರಾಜೋಳೆ, ಭೀಮಸೇನ ಕುಲಕರ್ಣಿ, ನಾಗರಾಜ ಮಹಾಗಾಂವಕರ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.