ADVERTISEMENT

ಡಾ ವಿಷ್ಣುವರ್ಧನ್ ಪುಣ್ಯಭೂಮಿ ತೆರವು ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 8:51 IST
Last Updated 15 ಆಗಸ್ಟ್ 2025, 8:51 IST
ವಿಷ್ಣುವರ್ಧನ್‌ ಅವರ ಸಮಾಧಿ ತೆರವು ಖಂಡಿಸಿ ಡಾ.ವಿಷ್ಣು ಸೇನಾ ಸಮಿತಿ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ವಿಷ್ಣುವರ್ಧನ್‌ ಅವರ ಸಮಾಧಿ ತೆರವು ಖಂಡಿಸಿ ಡಾ.ವಿಷ್ಣು ಸೇನಾ ಸಮಿತಿ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.   

ಯಡ್ರಾಮಿ: ಬೆಂಗಳೂರಿನ ಅಭಿಮಾನ ಸ್ಟುಡಿಯೋದಲ್ಲಿದ್ದ ಡಾ.ವಿಷ್ಣುವರ್ಧನ್ ರವರ ಪುಣ್ಯಭೂಮಿ ತೆರವುಗೊಳಿಸಿದ್ದನ್ನು ಖಂಡಿಸಿ ಡಾ.ವಿಷ್ಣು ಸೇನಾ ಸಮಿತಿಯಿಂದ ಪಟ್ಟಣದ ಸರ್ದಾರ್ ಶರಣಗೌಡ ವೃತ್ತದಿಂದ ತಹಶೀಲ್ದಾರ್ ಕಚೇರಿಯವರಿಗೆ ಬೃಹತ್ ಪ್ರತಿಭಟನೆ ಮೆರವಣಿಗೆ ಮಾಡಲಾಯಿತು.

ನಂತರ ತಹಶೀಲ್ದಾರ್ ಯಲ್ಲಪ್ಪ ಸುಬೇದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಸಮಿತಿಯ ತಾಲ್ಲೂಕು ಅಧ್ಯಕ್ಷ ರಾಹುಲ್ ಮದರಿ‌ ಮಾತನಾಡಿ, ಬೆಂಗಳೂರಿನ ಅಭಿಮಾನ ಸ್ಟುಡಿಯೋದಲ್ಲಿನ ವಿಷ್ಣುವರ್ಧನ್ ಅವರ ಪುಣ್ಯಭೂಮಿ ತೆರವು ಗೊಳಿಸಿರುವುದು ಖಂಡನೀಯ. ಅದೇ ಜಾಗದಲ್ಲಿ ಪುಣ್ಯಭೂಮಿ ಪುನರ್‌ ನಿರ್ಮಾಣ ಮಾಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಹೋರಾಟ ಮಾಡಬೇಕಾಗುತ್ತದೆ ಎಂದರು.

ADVERTISEMENT

ಪ್ರಭುಗೌಡ ಜವಳಗಿ ಸಾಹೇಬಗೌಡ ದೇಸಾಯಿ, ಸಾಂಬಶಿವ ಹಿರೇಮಠ, ವಿಶ್ವನಾಥ ಪಾಟೀಲ, ಅಮರನಾಥ ಸಾಹು ಕುಳಗೇರಿ, ಅಫ್ರೋಜ್ ಆತ್ನೂರ, ಭರತ್ ದೊರೆ, ಹನುಮಂತ ಕೂಡಲಗಿ, ಲಾಳೆಸಾಬ್ ಮನಿಯರ್, ಕೃಷ್ಣಪ್ಪ ತಳವಾರ್, ಮಡಿವಾಳ ಮೇಲಿನಮನಿ, ಚನ್ನಬಸಪ್ಪ ಕಾಚಾಪುರ್, ದೇವಿಂದ್ರ ಅರೈವಲ್ ಯಡ್ರಾಮಿ, ಬಾಲರಾಜ್ ಮಡಿವಾಳಕರ್, ನಿಂಗಪ್ಪ ನಾಯ್ಕೋಡಿ, ರಾಜಶೇಖರ್ ಬಳಬಟ್ಟಿ ಸೇರಿದಂತೆ ಅನೇಕರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.