ADVERTISEMENT

ಈಶಾನ್ಯ ಪದವೀಧರರ ಕ್ಷೇತ್ರ: 10ರವರೆಗೆ ಶೇ 8.34ಇಷ್ಟು ಮತದಾನ

ಬೀದರಿನಲ್ಲಿ ಕೇವಲ 6 ಶಿಕ್ಷಕರಿಂದ ಮತದಾನ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 6:18 IST
Last Updated 28 ಅಕ್ಟೋಬರ್ 2020, 6:18 IST
ಕಲಬುರ್ಗಿಯ ನೂತನ ವಿದ್ಯಾಲಯ ಕನ್ಯಾ ಶಾಲೆಯಲ್ಲಿ ಬುಧವಾರ, ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮತದಾನ ಮಾಡಲು ಬಂದ ಉಪನ್ಯಾಸಕಿಯರು
ಕಲಬುರ್ಗಿಯ ನೂತನ ವಿದ್ಯಾಲಯ ಕನ್ಯಾ ಶಾಲೆಯಲ್ಲಿ ಬುಧವಾರ, ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮತದಾನ ಮಾಡಲು ಬಂದ ಉಪನ್ಯಾಸಕಿಯರು   

ಕಲಬುರ್ಗಿ: ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಈಶಾನ್ಯ ಮತ ಕ್ಷೇತ್ರದಲ್ಲಿ ಬೆಳಿಗ್ಗೆ 8ರಿಂದ 10 ಗಂಟೆಯವರೆಗೆ ಒಟ್ಟಾರೆ ಶೇ 8.34 ಮತದಾನವಾಗಿದೆ.

ಕ್ಷೇತ್ರದ 144 ಮುಖ್ಯ ಮತಗಟ್ಟೆಗಳು ಹಾಗೂ 3 ಹೆಚ್ಚುವರಿ ಮತಗಟ್ಟೆಗಳಲ್ಲಿ ಹುರುಪಿನ ಮತದಾನ ನಡೆಯಿತು.

ಬೀದರಿನಲ್ಲಿ ಬೆಳಿಗ್ಗೆ 10 ಗಂಟೆಯವರೆಗೆ ಕೇವಲ 6 ಮಂದಿ ಮಾತ್ರ ಮತ ಚಲಾಯಿಸಿದ್ದಾರೆ.

ADVERTISEMENT

ಕೊಪ್ಪಳ ಜಿಲ್ಲೆಯಲ್ಲಿ ಬಿರುಸಿನ ಮತದಾನ ಕಂಡು ಬಂದಿದ್ದು ಬೆಳಿಗ್ಗೆ 10ರ ವೇಳೆಗೆ ಶೇ 16.4ರಷ್ಟು ಮತಗಳು ಚಲಾವಣೆಗೊಂಡಿವೆ.

ಕಲಬುರ್ಗಿ ಜಿಲ್ಲೆಯಲ್ಲಿ ಕೂಡ ಶೇ 11ರಷ್ಟು ಮತಗಳು ಚಲಾವಣೆಯಾಗಿವೆ.

ಯಾದಗಿರಿಯಲ್ಲಿ ಕೂಡ ನಾಲ್ಕು ಮತಗಟ್ಟೆಗಳಿದ್ದು, ಶೇ 8ರಷ್ಟು, ರಾಯಚೂರು ಜಿಲ್ಲೆಯಲ್ಲಿ ಶೇ 10.01ರಷ್ಟು ಮೈದಾನವಾಗಿದೆ.

ಕಲಬುರ್ಗಿಯ ಐಟಿಐ ಕಾಲೇಜು, ಕನ್ಯಾಶಾಲೆ ಹಾಗೂ ಮಹಾಗಾಂವ ಮತಗಟ್ಟೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕಿಯರೇ ಮತದಾನಕ್ಕೆ ಬಂದಿದ್ದು ಕಂಡು ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.