ADVERTISEMENT

ಹಳ್ಳ ದಾಟಲು ಹೋಗಿ ನೀರಿನ ರಭಸಕ್ಕೆ ಸಿಕ್ಕು ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 6:41 IST
Last Updated 12 ಅಕ್ಟೋಬರ್ 2020, 6:41 IST

ಕಲಬುರ್ಗಿ: ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಮರಗುತ್ತಿ ತಾಂಡಾ ಬಳಿ ಹಳ್ಳ ದಾಟಲು ಹೋದ ಶಾಂತಾಬಾಯಿ ಹೊಬು ರಾಠೋಡ (40) ಎಂಬ ಮಹಿಳೆ ಮುಳುಗಿ ‌ಸಾವಿಗೀಡಾಗಿದ್ದಾರೆ‌.

ಸೀತಾಫಲ ಹಣ್ಣು ತರಲು ಬೆಟ್ಟಕ್ಕೆ ಹೋಗಿದ್ದ ಮಹಿಳೆ ವಾಪಸ್ ಬರುವಾಗ ಹಳ್ಳದಲ್ಲಿ ಕೊಚ್ಚಿ ಹೋಗಿದ್ದರು. ಹಳ್ಳದ ದಡದ ಮರದ ಕೊಂಬೆಯಲ್ಲಿ ಸೋಮವಾರ ಬೆಳಿಗ್ಗೆ ಶವ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಕಮಲಾಪುರ ‌ಪೊಲೀಸರು ಭೇಟಿ ‌ನೀಡಿ ಪರಿಶೀಲನೆ ನಡೆಸಿದರು.

ಭಾನುವಾರವಷ್ಟೇ ಜಿಲ್ಲೆಯ ಶಹಾಬಾದ್ ನ ಅಜನಿ ಹಳ್ಳದಲ್ಲಿ ಮುಳುಗಿ ‌ಇಬ್ಬರು ಬಾಲಕರು ಸಾವಿಗೀಡಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.