ADVERTISEMENT

ಸ್ಪರ್ಧಾತ್ಮಕ ಪರೀಕ್ಷಾ ಕಾರ್ಯಾಗಾರ 22ರಿಂದ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2025, 14:35 IST
Last Updated 18 ಫೆಬ್ರುವರಿ 2025, 14:35 IST

ಕಲಬುರಗಿ: ‘ಬ್ಯಾಂಕಿಂಗ್‌, ಹಣಕಾಸು, ವಿಮಾ ಕ್ಷೇತ್ರಗಳಲ್ಲಿನ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷಾ ಸಿದ್ಧತೆಗೆ ಸಂಬಂಧಿಸಿದಂತೆ ಬ್ರೆಟ್ ಸಲ್ಯೂಷನ್ಸ್‌ ಸಂಸ್ಥೆಯು ಫೆಬ್ರುವರಿ 22 ಹಾಗೂ 23ರಂದು ನಗರದ ಅಮರತೀರ್ಥ ವಾಣಿಜ್ಯ ಸಂಕೀರ್ಣದಲ್ಲಿ ಉಚಿತ ಕಾರ್ಯಾಗಾರ ಆಯೋಜಿಸಿದೆ’ ಎಂದು ಬ್ರೆಟ್ ಸಲ್ಯೂಷನ್ಸ್‌ ಸಂಸ್ಥೆಯ ಅಧ್ಯಕ್ಷ ಅಶೋಕ ಹೆಗ್ಡೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಆಸಕ್ತರು ಮೊ.ಸಂ: 72059028983, 72059028989 ಹಾಗೂ 72059028988 ಸಂಪರ್ಕಿಸಬಹುದು. ಈ ಭಾಗದ ಅಭ್ಯರ್ಥಿಗಳು ಕಾರ್ಯಾಗಾರದ ಸದುಪಯೋಗ ಪಡೆಯಬೇಕು’ ಎಂದು ಮನವಿ ಮಾಡಿದರು.

‘ಬ್ಯಾಂಕಿಂಗ್‌, ಹಣಕಾಸು, ವಿಮಾ ಸಂಬಂಧಿ ಕ್ಷೇತ್ರಗಳಲ್ಲಿನ ನೇಮಕಾತಿ ಪರೀಕ್ಷೆಗಳ ತರಬೇತಿಗೆ ಈ ಭಾಗದವರು ಧಾರವಾಡ, ಬೆಂಗಳೂರು ಹಾಗೂ ಆಂಧ್ರಪ್ರದೇಶಕ್ಕೆ ತೆರಳಬೇಕಾಗಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ನಗರದಲ್ಲಿ ಬ್ರೆಟ್ ಸಲ್ಯೂಷನ್ಸ್‌ನ ಕೇಂದ್ರ ತೆರೆಯಲಾಗುತ್ತಿದೆ. ಕಡಿಮೆ ಶುಲ್ಕದಲ್ಲಿ ಭೌತಿಕ ಹಾಗೂ ಆನ್‌ಲೈನ್‌ ತರಗತಿಗಳನ್ನು ನಡೆಸಲಾಗುವುದು. ಹಿಂದೆ ಈ ಕ್ಷೇತ್ರಗಳಲ್ಲಿ ಕೆಲಸ ಮಾಡಿದವರು ಬೋಧನೆ ಮಾಡುವರು’ ಎಂದರು.

ADVERTISEMENT

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ನಂದಕಿಶೋರ, ನಿರ್ದೇಶಕ ಕೃಷ್ಣಮೂರ್ತಿ ಹಾಗೂ ಕೇಶವ ಬಿರಾದಾರ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.