ADVERTISEMENT

ಪ್ರಸೂತಿ ತಜ್ಞರಿಗಾಗಿ ಕಾರ್ಯಾಗಾರ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 17:24 IST
Last Updated 12 ನವೆಂಬರ್ 2019, 17:24 IST
ಡಾ.ಸುರೇಶ ಪಾಟೀಲ
ಡಾ.ಸುರೇಶ ಪಾಟೀಲ   

ಕಲಬುರ್ಗಿ:ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞ ವೈದ್ಯರಿಗಾಗಿ ಹಿಸ್ಟ್ರೋಸ್ಕೋಪಿ ಮತ್ತು ಇತ್ತೀಚಿನ ಸಂಶೋಧನೆಗಳು ಕುರಿತು ಎರಡು ದಿನಗಳ ಕಾರ್ಯಾಗಾರವನ್ನು (ಸಿಎಂಇ) ನ 13–14ರಂದು ನಗರದ ದರ್ಗಾ ರಸ್ತೆಯ ಸಂತ್ರಾಸವಾಡಿಯಲ್ಲಿರುವ ಮೆಡಿಕೇರ್ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಆಸ್ಪತ್ರೆ ಮುಖ್ಯಸ್ಥ ಡಾ.ಸುರೇಶ ಪಾಟೀಲ ತಿಳಿಸಿದ್ದಾರೆ.

ಕಾರ್ಯಾಗಾರದಲ್ಲಿ ವಿಶ್ವ ವಿಖ್ಯಾತ ಹಿಸ್ಟ್ರೋಸ್ಕೋಪಿ ಸರ್ಜನ್ ಆಗಿರುವ ಜಪಾನಿನ ಡಾ.ಒಸಾಮ ಶೌಕಿ ತರಬೇತಿ ನೀಡಲಿದ್ದಾರೆ. 13ರಂದು ಬೆಳಿಗ್ಗೆ 11ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಬಳಿಕ ತಾಂತ್ರಿಕ ಗೋಷ್ಠಿಗಳು ನಡೆಯಲಿವೆ.

ಕಲಬುರಗಿ ಜಿಲ್ಲಾ ಪ್ರಸೂತಿ ತಜ್ಞರ ಮತ್ತು ಸ್ತ್ರೀ ರೋಗ ಪರಿಣಿತ ಸಂಘ ಮತ್ತು ಮೆಡಿಕೇರ್ ಆಸ್ಪತ್ರೆ ಜತೆಗೂಡಿ ಈ ಕಾರ್ಯಾಗಾರವನ್ನು ಹಮ್ಮಿಕೊಂಡಿವೆ. ಡಾ.ಒಸಾಮ ಅವರು ವಿಶ್ವದ ಸುಮಾರು 40 ದೇಶಗಳಲ್ಲಿ ಇಂತಹ ಶಿಬಿರಗಳನ್ನು ನಡೆಸಿ ವೈದ್ಯರಿಗೆ ಹೊಸ ತೆರನಾದ ಪದ್ದತಿಗಳನ್ನು ತಿಳಿಸಿಕೊಟ್ಟಿದ್ದಾರೆ ಎಂದು ಡಾ.ಪಾಟೀಲ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.