ಕಲಬುರಗಿ: ಇಲ್ಲಿನ ಏಷಿಯನ್ ಬಿಸಿನೆಸ್ ಸೆಂಟರ್‌ನಲ್ಲಿ ತೆರೆದಿರುವ ಪೂರ್ಣಿಮಾ ಪಿ.ಎಂ. ಬಿರಾದಾರ ಉಚಿತ ಡಯಾಲಿಸಿಸ್ ಕೇಂದ್ರದಲ್ಲಿ ಗುರುವಾರ ಸ್ಪಂದನ ಮಹಿಳಾ ಸಂಘದ ವತಿಯಿಂದವಿಶ್ವ ಆರೋಗ್ಯ ದಿನ ಆಚರಿಸಲಾಯಿತು.
ಸ್ಪಂದನ ಮಹಿಳಾ ಸಂಘದ ಸದಸ್ಯರು ತಮ್ಮ ದುಡಿಮೆಯಿಂದ ಸಂಗ್ರಹಿಸಿದ ಹಣದಿಂದ ಡಯಾಲಿಸಿಸ್‌ಗೆ ಒಳಗಾದವರ ವೆಚ್ಚ ಭರಿಸುವ ಮೂಲಕ, ಅವರಿಗೆ ಧೈರ್ಯ ಹೇಳಿದರು.ಡಯಾಲಿಸಿಸ್ ಕೇಂದ್ರ ತೆರೆದ ಶರಣು ಪಪ್ಪ ಅವರನ್ನು ಸನ್ಮಾನಿಸಿದರು.
ಈ ಸಂದರ್ಭ ಮಾತನಾಡಿದ ಸಂಘದ ಅಧ್ಯಕ್ಷೆಲತಾ ಎಸ್. ಬಿಲಗುಂದಿ, ‘ಜಿಲ್ಲೆಯಲ್ಲಿ ಕಿಡ್ನಿ ವೈಫಲ್ಯದಿಂದ ಬಳಲುವವರ ಸಂಖ್ಯೆ ಹೆಚ್ಚುತ್ತಿದೆ. ಬಡ ಹಾಗೂ ಮಧ್ಯಮ ವರ್ಗದವರು ಇದರ ವೆಚ್ಚ ಭರಿಸದೇ ಪರದಾಡುವಂತಾಗಿದೆ. ಕಿಡ್ನಿ ರೋಗಿಗಳ ಅನುಕೂಲಕ್ಕಾಗಿ ಶರಣು ಪಪ್ಪಾ ಅವರು ಉಚಿತ ಡಯಾಲಿಸಿಸ್ ಕೇಂದ್ರ ತೆರೆದಿದ್ದು ಮಾದರಿ ಕೆಲಸ. ಈ ಕೇಂದ್ರದ ಯಶಸ್ಸಿಗೆ ಸ್ಪಂದನಾ ಸಂಘವೂ ಕೈ ಜೋಡಿಸುತ್ತದೆ’ ಎಂದರು.
ಸಂಘದ ಉಪಾಧ್ಯಕ್ಷೆ ಸುಮಾ, ಕಾರ್ಯದರ್ಶಿ ವಿಜಯಲಕ್ಷ್ಮಿ ಸಿ. ಸಿಂಗೋಡಿ, ಖಜಾಂಚಿ ರೂಪಾ ಬಿ. ಪವಾರ್, ಶೀಲಾ ಎಸ್. ಕುಲಕರ್ಣಿ, ರೇಣುಕಾ ಭರತನೂರ, ಪೂರ್ಣಿಮಾ ಶಿವಕುಮಾರ,ರಾಜಶ್ರೀ ಪಪ್ಪಾ, ಶ್ರೀದೇವಿ ಫರತಾಬಾದ್ ಜ್ಯೋತಿ ಕೊರಳ್ಳಿ, ವಿಯಲಕ್ಷ್ಮಿ ಪಾಟೀಲ, ಜ್ಯೋತಿ ನಿಪ್ಪಾಣಿ, ಪ್ರತಿಮಾ ಹಳ್ಳೆ, ಮಾಲಾ ಧನ್ನೂರ, ಮಾಲಾ ಕಣ್ಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.