ADVERTISEMENT

ಗೋಣಿಕೊಪ್ಪಲು: ಗೋಲ್ಡನ್‌ ಜೇಸಿ ಸಪ್ತಾಹಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 7:49 IST
Last Updated 17 ಸೆಪ್ಟೆಂಬರ್ 2013, 7:49 IST

ಗೋಣಿಕೊಪ್ಪಲು: ಸಮೀಪದ ಪೊನ್ನಂಪೇಟೆ ಗೋಲ್ಡನ್ ಜೇಸಿ ಸಪ್ತಾಹ ಭಾನುವಾರ ಮುಕ್ತಾಯ­ವಾಯಿತು.  ಗೋಣಿಕೊಪ್ಪಲಿನ ಆರ್‌ಎಂಸಿ ಸಭಾಂಗಣದಲ್ಲಿ ಒಂದು ವಾರ ನಡೆದ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳು ಗಮನ ಸೆಳೆದವು. ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ನಿನಾದ ವಿದ್ಯಾಸಂಸ್ಥೆಯ ದೀಪಿಕಾ, ಎ.ಎಲ್‌. ಜೆಸಿಂತಾ, ಬಿ.ಎಸ್‌. ಅಂಬಿಕಾ ಬಹುಮಾನ ಪಡೆದುಕೊಂಡರು. ಪ್ರಬಂಧ ಸ್ಪರ್ಧೆಯಲ್ಲಿ ಅಪ್ಪಚ್ಚಕವಿ ವಿದ್ಯಾಸಂಸ್ಥೆಯ ಪಿ.ಬಿ. ಹರ್ಷಿತಾ, ಕೆ.ಎ. ಲಾವಣ್ಯ, ಗ್ರೀಷ್ಮಾ ಗಂಗಮ್ಮ, ಎನ್‌.ವಿ. ಭೂಮಿಕಾ, ರಮೋನಾ, ಇಂಚರಾ ಬಹುಮಾನ ಗಳಿಸಿದರು.

ಸಪ್ತಾಹದಲ್ಲಿ ಪೊನ್ನಂಪೇಟೆ ಕಾನೂರು ರಸ್ತೆ ಜಂಕ್ಷನ್‌ನಲ್ಲಿ ರಸ್ತೆ ಸೂಚನಾ ಫಲಕ ಅಳವಡಿಕೆ, ಜೇಸಿ ಸದಸ್ಯರ ಕುಟುಂಬಕ್ಕೆ ತರಬೇತಿ, ಪರಿಸರ ಜಾಗೃತಿ, ದೇಶಭಕ್ತಿಗೀತೆ ಗಾಯನ ಸ್ಪರ್ಧೆ, ಪುಷ್ಪಾಲಂಕಾರ ತರಬೇತಿ ಮುಂತಾದ ಕಾರ್ಯಕ್ರಮಗಳು ನಡೆದವು.

ಜೇಸಿ ಅಧ್ಯಕ್ಷ ರಾಬಿನ್‌ ಸುಬ್ಬಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಅರುಣ್‌ ಭೀಮಯ್ಯ, ಜೇಸಿ ವಲಯ ಉಪಾಧ್ಯಕ್ಷ ಮಧೋಶ್‌ ಪೂವಯ್ಯ, ಪಕ್ಷಿತಜ್ಞ ಡಾ.ನರಸಿಂಹನ್‌, ನಿನಾದ ವಿದ್ಯಾಸಂಸ್ಥೆ ಅಧ್ಯಕ್ಷೆ ನಿರ್ಮಲಾ ಬೋಪಣ್ಣ, ಅಪ್ಪಚ್ಚಕವಿ ವಿದ್ಯಾಲಯದ ಅಧ್ಯಕ್ಷ ಜಿಮ್ಮಿ ಅಣ್ಣಯ್ಯ, ಪಾಲಿಬೆಟ್ಟ ಸ್ವಸ್ಥ ಸಂಸ್ಥೆ ನಿರ್ದೇಶಕಿ ಗಂಗಾ ಚಂಗಪ್ಪ, ಜೇಸಿ ವಲಯ ಸಂಯೋಜಕ ಎಂ.ಎಂ. ಅಶೋಕ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದ ಜೇಸಿ ದಾದು ಪೂವಯ್ಯ ಅವರ ಪುತ್ರಿ ರಿಯಾ, ಧೃತಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ನಿರನ್‌ ಮೊಣ್ಣಪ್ಪ ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.