ADVERTISEMENT

ಯುವಜನರ ಸಂಘಟನೆಗೆ ಕ್ರಮ: ರಂಜನ್

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 8:10 IST
Last Updated 1 ಅಕ್ಟೋಬರ್ 2012, 8:10 IST

ನಾಪೋಕ್ಲು: ರಾಜ್ಯದಲ್ಲಿ ಮೊದಲ ಬಾರಿಗೆ ಯುವಜನರ ಆರ್ಥಿಕ ಸಬಲತೆಗೆ `ಯೂತ್ ಪಾಲಿಸಿ~ ಯೋಜನೆ ಜಾರಿಗೊಳಿಸಲಾಗಿದೆ ಎಂದು ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಮಂಡೇಪಂಡ ಅಪ್ಪಚ್ಚು ರಂಜನ್ ಹೇಳಿದರು.

ಕೊಡವ ಸಮಾಜದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಕೈಲ್ ಪೊಳ್ದು ಹಬ್ಬದ ಒತ್ತೊರ್ಮೆ ಕೂಟ ಹಾಗೂ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಯುವಜನರು ಕೆಎಎಸ್, ಐಎಎಸ್ ಪರೀಕ್ಷೆ ಎದುರಿಸಲು ಮತ್ತು ಬಹು ರಾಷ್ಟ್ರೀಯ ಕಂಪೆನಿಗಳಲ್ಲಿ ಉದ್ಯೋಗಕ್ಕೆ ಸೇರಲು ಸೂಕ್ತ ತರಬೇತಿ ನೀಡಲಾ ಗುವುದು. ಪ್ರತಿ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಕಾರ್ಪೋರೇಷನ್ ಅಡಿಯಲ್ಲಿ ಸಂಘ ಸ್ಥಾಪಿಸಿ ಯುವಜನರ ಸಂಘಟನೆ ಬಲಪಡಿಸಲಾಗುವುದು.

ಕ್ರೀಡೆ ಅಭಿವೃದ್ಧಿಗೆ ರೂ.13ಕೋಟಿ ವೆಚ್ಚದಲ್ಲಿ ಕೊಡಗಿನ ಪೊನ್ನಂಪೇಟೆ ಸೋಮವಾರಪೇಟೆ ಮತ್ತು ಕೂಡಿಗೆ ಯಲ್ಲಿ ಟರ್ಫ್ ಕ್ರೀಡಾಂಗಣ ನಿರ್ಮಿ ಸಲು ಹಾಗೂ ಕ್ರೀಡಾ ವಿದ್ಯಾರ್ಥಿಗಳಿಗೆ ತರಬೇತಿ ಹಾಗೂ ಪೌಷ್ಟಿಕ ಆಹಾರ ನೀಡಲು ಉದ್ದೇಶಿಸಲಾಗಿದೆ.

ಕ್ರೀಡಾ ಶಾಲೆಯಲ್ಲಿ 8ರಿಂದ 9ನೇ ತರಗತಿಯೊಂದಿಗೆ ಮುಂದಿನ ದಿನಗಳಲ್ಲಿ 5,6 ಮತ್ತು 7ನೇ ತರಗತಿಯ ವಿದ್ಯಾ ರ್ಥಿಗಳಿಗೂ ಸೇರ್ಪಡಿಸಿ ಅವಕಾಶ ಕಲ್ಪಿಸಲಾಗುವುದು. ಕರ್ನಾಟಕದಲ್ಲಿ ಮೊದಲ ಬಾರಿಗೆ ಒಲಂಪಿಕ್‌ನಲ್ಲಿ ಪಾಲ್ಗೊಂಡ ಒಟ್ಟು 14 ಕ್ರೀಡಾ ಪಟುಗಳಿಗೆ 70ಲಕ್ಷ ನೆರವು ನೀಡಲಾ ಗಿದೆ. ಪ್ಯಾರಾ ಒಲಂಪಿಕ್‌ನಲ್ಲಿ ಬೆಳ್ಳಿ ಪದಕ ಪಡೆದ ಕ್ರೀಡಾಪಟು ಗಿರೀಶ್‌ಗೆ 25ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗಿದೆ ಎಂದರು. 

ಕೊಡವ ಸಮಾಜದ ಅಧ್ಯಕ್ಷ ಮಣ ವಟ್ಟೀರ ಮಾಚಯ್ಯ ಅಧ್ಯಕ್ಷತೆ ವಹಿ ಸಿದ್ದರು. ಕಾಫಿ ಬೆಳೆಗಾರ ಕಂಗಾ ಣಂಡ ಇ. ಕಾಳಯ್ಯ, ಸಣ್ಣುವಂಡ ಡಾ. ಕಾವೇರಪ್ಪ, ಮಂಡೀರ ಸೋಮಣ್ಣ, ಕಲಿಯಂಡ ಹ್ಯಾರಿ ಮಂದಣ್ಣ ಇದ್ದರು. ಬಾದುಮಂಡ ಮುತ್ತಪ್ಪ ಸ್ವಾಗತಿ ಸಿದರು. ಬಿದ್ದಾಟಂಡ ರಮೇಶ್ ಚೆಂಗಪ್ಪ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.