ADVERTISEMENT

ಸಾಹಿತ್ಯ ಸಮ್ಮೇಳನದಲ್ಲಿ ಇಂದು

​ಪ್ರಜಾವಾಣಿ ವಾರ್ತೆ
Published 8 ಜನವರಿ 2014, 6:02 IST
Last Updated 8 ಜನವರಿ 2014, 6:02 IST

ಭಾರತೀಸುತ ಪ್ರಧಾನ ವೇದಿಕೆ
ಗೋಷ್ಠಿ 3 – ಬೆಳಿಗ್ಗೆ 9.30ರಿಂದ 11.30ರವರೆಗೆ
ಕನ್ನಡ ಸಾಹಿತ್ಯದಲ್ಲಿ ದಲಿತ ಸಂವೇದನೆ: ಅಧ್ಯಕ್ಷತೆ– ಡಾ.ಸಿದ್ದಲಿಂಗಯ್ಯ, ವಿಷಯ– ದಲಿತ ಸಾಹಿತ್ಯದ ಪ್ರಮುಖ ಆಶಯಗಳು. ಆಶಯ ನುಡಿ– ಡಾ.ಮೂಡ್ನಾಕೂಡು ಚಿನ್ನಸ್ವಾಮಿ,  ಡಾ.ಎಚ್. ದಂಡಪ್ಪ – ದಲಿತ ಸಾಹಿತ್ಯ ಮತ್ತು ಚಳವಳಿಗಳು. ಡಾ.ಪ್ರಶಾಂತ್ ಜಿ. ನಾಯಕ್– ದಲಿತ ಸಾಹಿತ್ಯ ಮತ್ತು ರಾಜಕೀಯ ದೃಷ್ಟಿಕೋನ.

ಗೋಷ್ಠಿ 4– ಮಧ್ಯಾಹ್ನ 12.30ರಿಂದ 2ರವರೆಗೆ
ನೂರರ ಗಡಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು: ಅಧ್ಯಕ್ಷತೆ– ಪ್ರೊ.ಜಿ. ಅಶ್ವತ್ಥನಾರಾಯಣ, ವಿಷಯ– ಕನ್ನಡ ಸಾಹಿತ್ಯ ಪರಿಷತ್ತು ನಡೆದುಬಂದ ದಾರಿ. ಆಶಯ ನುಡಿ– ಡಾ.ಬಸವಲಿಂಗ ಪಟ್ಟದೇವರು, ಡಾ.ಎಂ.ಎಲ್‌. ಶಂಕರಲಿಂಗಪ್ಪ– ಕನ್ನಡ ಸಾಹಿತ್ಯ ಪರಿಷತ್ತು: ಸಾಹಿತ್ಯ ಮತ್ತು ಸಾಂಸ್ಕೃತಿಕ ಸಾಧನೆ. ಡಾ.ಪಿ.ವಿ. ನಾರಾಯಣ– ಕನ್ನಡದ ಭಾಷಾಭಿವೃದ್ಧಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡುಗೆ.

ಗೋಷ್ಠಿ 5– ಮಧ್ಯಾಹ್ನ 3ರಿಂದ 4ರವರೆಗೆ
ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ.

ಗೋಷ್ಠಿ 6– ಸಂಜೆ 4ರಿಂದ 6ರವರೆಗೆ
ಕನ್ನಡ ಸಾಹಿತ್ಯ ಮತ್ತು ದೇಸೀಯತೆ: ಅಧ್ಯಕ್ಷತೆ– ಪ್ರೊ.ಎಸ್‌.ಜಿ. ಸಿದ್ದರಾಮಯ್ಯ. ಆಶಯ ನುಡಿ– ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ. ಡಾ.ಎಸ್‌.ಆರ್‌. ವಿಜಯಶಂಕರ್‌– ಆಧುನಿಕ ಪೂರ್ವ ಕನ್ನಡ ಸಾಹಿತ್ಯದಲ್ಲಿ ದೇಶೀಯ ಪ್ರಜ್ಞೆ, ಡಾ.ಚಕ್ಕೆರೆ ಶಿವಶಂಕರ್‌– ಆಧುನಿಕ ಕನ್ನಡ ಸಾಹಿತ್ಯದಲ್ಲಿ ದೇಶೀಯ ಪ್ರಜ್ಞೆ.

ಸಾಂಸ್ಕೃತಿಕ ಕಾರ್ಯಕ್ರಮಗಳು
ಸಂಜೆ 7ರಿಂದ: ಕೊಡಗು ಗೌಡ ಮಹಿಳಾ ಒಕ್ಕೂಟದಿಂದ ಗೌಡ ಸಂಸ್ಕೃತಿ ದರ್ಶನ, ರಾಮನಗರ ಕಲ್ಪಶ್ರೀ ಪರಫಾರ್ಮಿಂಗ್‌ ಆರ್ಟ್ಸ್‌ ಸೆಂಟರ್‌ ತಂಡದಿಂದ ಕರ್ನಾಟಕ ವೈಭವ ನೃತ್ಯ ರೂಪಕ, ಶಿವಮೊಗ್ಗದ ಅರ್ಪಿತಾ ಮಂದರಕುಮಾರ್‌ ಅವರಿಂದ ಸುಗಮ ಸಂಗೀತ, ಮಡಿಕೇರಿಯ ಅಂಬಳೆ ಹೇರಂಬ– ಹೇಮಂತ ಸಹೋದರರಿಂದ ವೇಣು ವಾದನ, ಮೈಸೂರಿನ ರಂಗಾಯಣ ಜನಾರ್ಧನ (ಜನ್ನಿ) ಮತ್ತು ತಂಡದಿಂದ ಜಾನಪದ ಗಾಯನ, ಹುಬ್ಬಳ್ಳಿಯ ಡಾ.ಬಿ.ಎಚ್‌. ಆನಂದಪ್ಪ ಅವರಿಂದ ಕಿಂದರಿಜೋಗಿ ಕಲೆ, ಬಾಗಲಕೋಟೆಯ ಸರಸ್ವತಿ ಸಬರದ ಅವರಿಂದ ವಚನಗಾಯನ, ಚಿತ್ರದುರ್ಗದ ಚಂದ್ರಪ್ಪ ಮತ್ತು ಸಂಗಡಿಗರಿಂದ ಲಾವಣಿ ಪದ, ಗದುಗಿನ ವೀರಣ್ಣ ಚನ್ನಪ್ಪ ಅಂಗಡಿ ಅವರಿಂದ ಗೀಗೀ ಪದ, ಕೊಡಗಿನ (ಕಡಗದಾಳು) ಬೊಟ್ಲಪ್ಪ ಯುವಕ ಸಂಘದಿಂದ ಕೋಲಾಟ, ದಾವಣಗೆರೆಯ ಮಹಾಂತೇಶ ಶಾಸ್ತ್ರಿ ಹಿರೇಮಠ ಅವರಿಂದ ತತ್ವಪದ, ಕೊಪ್ಪಳದ ದುರ್ಗಪ್ಪ ಹಿರೇಮನಿ ಅವರಿಂದ ಸುಗಮ ಸಂಗೀತ, ಜೀವನಸಾಬ ವಾಲಿಕಾರ್‌ ಅವರಿಂದ ಜಾನಪದ ಗಾಯನ ಹಾಗೂ ಮಂಗಳೂರು–ಕಟೀಲಿನ ದುರ್ಗಾ ಮಕ್ಕಳ ಮೇಳದಿಂದ ಬಬ್ರುವಾಹನ ಯಕ್ಷಗಾನ ನಡೆಯಲಿದೆ.

ಸಮಾನಾಂತರ ವೇದಿಕೆ
ಕೊಡಗಿನ ಗೌರಮ್ಮ ವೇದಿಕೆ, ಡಿ.ಎನ್‌. ಕೃಷ್ಣಯ್ಯ ಮಹಾಮಂಟಪ
4ಗೋಷ್ಠಿ 2– ಬೆಳಿಗ್ಗೆ 9.30ರಿಂದ 11ರವರೆಗೆ
ಸಾಮಾಜಿಕ ವಲಯದಲ್ಲಿ ಕನ್ನಡದ ಸ್ಥಾನಮಾನ: ಅಧ್ಯಕ್ಷತೆ– ಡಾ.ವಿ.ಪಿ. ನಿರಂಜನ ಆರಾಧ್ಯ. ವಿಷಯ– ಪ್ರಾಥಮಿಕ ಶಿಕ್ಷಣ ಮತ್ತು ಮಾತೃಭಾಷಾ ಮಾಧ್ಯಮ. ಆಶಯ ನುಡಿ– ಚಂದ್ರಶೇಖರ್‌ ಪಾಟೀಲ್‌ (ಚಂಪಾ), ಮೋಹನ ನಾಗಮ್ಮನವರ– ಕರ್ನಾಟಕದ ಗಡಿ ಸಂಬಂಧಿತ ಸವಾಲುಗಳು, ಡಾ.ಹೇಮಲತಾ ಮಹಿಷಿ– ಕನ್ನಡಿಗರು ಮತ್ತು ಉದ್ಯೋಗಾವಕಾಶ.

ಗೋಷ್ಠಿ 3– ಬೆಳಿಗ್ಗೆ 11ರಿಂದ 12.30ರವರೆಗೆ
ಕನ್ನಡದ ದಾಸ ಸಾಹಿತ್ಯ: ಅಧ್ಯಕ್ಷತೆ– ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ. ವಿಷಯ– ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ: ದಾಸ ಸಾಹಿತ್ಯದ ಕೊಡುಗೆ. ಆಶಯ ನುಡಿ– ಡಾ.ಶಿವರಾಮ ಶೆಟ್ಟಿ. ಡಾ.ಮಧುಮತಿ ದೇಶಪಾಂಡೆ– ದಾಸ ಸಾಹಿತ್ಯ ಮತ್ತು ಮಹಿಳೆ. ಡಾ.ಆರ್‌.ಕೆ. ಪದ್ಮನಾಭ– ಕೀರ್ತನೆಗಳು ಮತ್ತು ಸಂಗೀತ.

ಗೋಷ್ಠಿ 4– ಮಧ್ಯಾಹ್ನ 12.30ರಿಂದ 2ರವರೆಗೆ
ವಿಜ್ಞಾನ– ತಂತ್ರಜ್ಞಾನ: ಅಧ್ಯಕ್ಷತೆ– ಟಿ.ಆರ್‌. ಅನಂತರಾಮು. ವಿಷಯ– ವಿಜ್ಞಾನ ಸಂವಹನದ ಸವಾಲುಗಳು. ಆಶಯ ನುಡಿ– ಹಾಲ್ದೊಡ್ಡೇರಿ ಸುಧೀಂದ್ರ. ಎನ್‌.ಎಂ. ಇಸ್ಮಾಯಿಲ್‌– ಕನ್ನಡದ ಸರ್ವಾಂಗೀಣ ಅಭಿವೃದ್ಧಿಗೆ ಮಾಹಿತಿ ತಂತ್ರಜ್ಞಾನದ ಬಳಕೆ. ಸಂಪಿಗೆ ತೋಂಟದಾರ್ಯ– ಕನ್ನಡ ವಿಜ್ಞಾನ– ಸಾಹಿತ್ಯ; ನಮ್ಮ ನಿರೀಕ್ಷೆಗಳೇನು?

ಗೋಷ್ಠಿ 5– ಮಧ್ಯಾಹ್ನ 2.30ರಿಂದ 4ರವರೆಗೆ
ಕರ್ನಾಟಕದ ಭಾಷಿಕ ಪರಿಸರ: ಅಧ್ಯಕ್ಷತೆ– ಡಾ.ಕಿಕ್ಕೇರಿ ನಾರಾಯಣ. ವಿಷಯ– ಭಾಷಾ ಭಾಂಧವ್ಯದ ಸ್ವರೂಪ ಮತ್ತು ಸಮಸ್ಯೆಗಳು. ಡಾ.ಎಂ.ಟಿ. ರತಿ– ಕನ್ನಡ, ಕೊಡವ ಮತ್ತು ಅರೆಭಾಷೆ. ಡಾ.ಗಣನಾಥ ಎಕ್ಕಾರು– ಕನ್ನಡ, ತುಳು, ಕೊಂಕಣಿ, ಬ್ಯಾರಿ. ಡಾ.ವಿ.ಜಿ.ಪೂಜಾರ್‌– ಕನ್ನಡ, ಉರ್ದು ಮತ್ತು ತೆಲುಗು. ಡಾ.ತಮಿಳ್‌ ಸೆಲ್ವಿ– ಕನ್ನಡ, ತಮಿಳು, ಮಲೆಯಾಳ.

ಗೋಷ್ಠಿ 6– ಸಂಜೆ 4ರಿಂದ 6ರವರೆಗೆ
ಸಾಂಸ್ಕೃತಿಕ ಸಂಶೋಧನೆ: ಅಧ್ಯಕ್ಷತೆ– ಡಾ.ಬಸವರಾಜ ಕಲ್ಗುಡಿ, ವಿಷಯ– ಸಾಂಸ್ಕೃತಿಕ ಸಂಶೋಧನೆಯ ಹೊಸ ಸಾಧ್ಯತೆಗಳು. ಆಶಯದ ನುಡಿ– ಡಾ.ಎಂ. ಚಂದ್ರ ಪೂಜಾರಿ. ಡಾ.ಕಾಳೇಗೌಡ ನಾಗವಾರ– ಜಾನಪದ ಅಧ್ಯಯನ. ಡಾ.ಎಂ.ಜಿ. ನಾಗರಾಜ್‌– ಆಕರ ಸಂಶೋಧನೆ.

ಸಾಂಸ್ಕೃತಿಕ ಕಾರ್ಯಕ್ರಮಗಳು
ಸಂಜೆ 7ರಿಂದ:  ಗದಗ ಎಸ್.ವಿ. ಭಜಂತ್ರಿ ತಂಡದಿಂದ ಶಹನಾಯಿ ವಾದನ, ಮಡಿಕೇರಿ– ಗಾಳಿಬೀಡು ನವೋದಯ ಶಾಲೆ ವಿದ್ಯಾರ್ಥಿಗಳಿಂದ ಗಜಾನನ ನೃತ್ಯ, ಮೂರ್ನಾಡು ಕಾವೇರಿ ನೃತ್ಯ ಅಕಾಡೆಮಿ ವತಿಯಿಂದ ನೃತ್ಯ ನಮನ, ಟಿ.ಶೆಟ್ಟಿಗೇರಿ ರೂಟ್ಸ್‌ ಎಜ್ಯುಕೇಶನ್‌ ಟ್ರಸ್ಟ್‌ ವತಿಯಿಂದ ನೃತ್ಯ, ಸೋಮವಾರಪೇಟೆ ವಂಶಿಕಲಾ ಸಂಸ್ಥೆಯಿಂದ ದೇಶ ಭಕ್ತಿಗೀತೆ ನೃತ್ಯ, ಮಕ್ಕಂದೂರು ಕೊಡವ ಸಮಾಜದಿಂದ ಚೌರಿ ಆಟ್, ಕತ್ತಿಯಾಟ್, ಗೋಣಿಕೊಪ್ಪಲುವಿನ ಸೈಕ್ಲೋನ್ ಡ್ಯಾನ್ಸ್ ಇನ್ಸ್‌ಟಿಟ್ಯೂಟ್‌ ವತಿಯಿಂದ ಕನ್ನಡ ಗೀತೆ ನೃತ್ಯ, ಕೊಡಗು ಗಾನ ಮಿಲನ ತಂಡದಿಂದ ಸುಗಮ ಸಂಗೀತ, ಮಡಿಕೇರಿಯ ಪ್ರಜ್ಞಕಲಾ ಕೇಂದ್ರದಿಂದ ನೃತ್ಯ, ಮಡಿಕೇರಿಯ ತಾಂಡವಂ ನೃತ್ಯ ಸಂಸ್ಥೆಯಿಂದ ಶಿಲಾಬಾಲಿಕಾ ನೃತ್ಯ. ಕೋತೂರು ಶಿಲ್ಪಿಕಾ ಮತ್ತು ಶಾಂಘವಿ ತಂಡದಿಂದ ಜಾನಪದ ನೃತ್ಯ, ಗೋಣಿಕೊಪ್ಪಲು ಡ್ಯೂಡ್ರಾಪ್‌ ಡ್ಯಾನ್ಸ್‌ ಕ್ರೂವ್‌ ವತಿಯಿಂದ ಕರುನಾಡ ನೃತ್ಯ, ತೋಮರ್‌ ಮಲೆ ಕುಡಿಯರ ತಂಡದಿಂದ ಮಲೆಕುಡಿಯರ ನೃತ್ಯ, ಗುಲ್ಬರ್ಗಾದ ಸದಾಶಿವ ಪಾಟೀಲ ಅವರಿಂದ ಸುಗಮ ಸಂಗೀತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.