ADVERTISEMENT

ಪ್ರತ್ಯೇಕ ಪ್ರಕರಣ; ಇಬ್ಬರಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 3:06 IST
Last Updated 11 ಡಿಸೆಂಬರ್ 2025, 3:06 IST

ಮಡಿಕೇರಿ: ಎರಡು ಪ್ರತ್ಯೇಕ ಕೊಲೆ ಪ್ರಕರಣದ ಅಪರಾಧಿಗಳಿಗೆ ಕೋರ್ಟ್‌ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿದೆ.

ವಿರಾಜಪೇಟೆ ತಾಲ್ಲೂಕಿನ ಕಾಕೋಟುಪರಂಬು ನಿವಾಸಿ ಚೋಮಚ್ಚೀರ ಪಿ.ಲವ (30) ಹಾಗೂ ಪೊನ್ನಂಪೇಟೆ ತಾಲ್ಲೂಕಿನ ಕುಂಬಾರಕಟ್ಟೆಯ ಜೇನುಕುರುಬರ ರಾಜು ಶಿಕ್ಷೆಗೆ ಗುರಿಯಾದವರು. ಚೋಮಚ್ಚೀರ ಪಿ.ಲವ ತನ್ನ ಪತ್ನಿ ಜೇನುಕುರುಬರ ಸುಮಿತ್ರಾ ಅವರನ್ನು 2022ರ ಏಪ್ರಿಲ್ 28ರಂದು ಕಬ್ಬಿಣದ ಪೈಪಿನಿಂದ ಹೊಡೆದು ಕೊಲೆ ಮಾಡಿದ್ದ.

ಜೇನುಕುರುಬರ ರಾಜು, ತನ್ನೊಂದಿಗೆ ಮಲಗದೇ ಮಕ್ಕಳೊಂದಿಗೆ ಮಲಗುತ್ತಾಳೆ ಎಂದು ಜಗಳ ತೆಗೆದು ಪತ್ನಿ ಮುತ್ತಕ್ಕಿ ಅವರನ್ನು 2022ರ ಜೂನ್ 13ರಂದು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದ. ಇಬ್ಬರು ಅಪರಾಧಿಗಳಿಗೂ ನ್ಯಾಯಾಧೀಶರಾದ ಎಸ್.ನಟರಾಜ್ ಅವರು ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ, ₹ 25 ಸಾವಿರ ದಂಡ ವಿಧಿಸಿದ್ದಾರೆ. ಈ ಎರಡೂ ಪ್ರಕರಣಗಳಲ್ಲಿಯೂ ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಯಾಸೀನ್ ಅಹ್ಮದ್ ಅವರು ವಾದ ಮಂಡಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.