ADVERTISEMENT

‘ಕೃಷಿ ಭೂಮಿ ಮಾರಾಟ ಕಳವಳಕಾರಿ’

ಕಾಕೋಟುಪರಂಬುವಿನ ಕೈಲ್ ಮುಹೂರ್ತ ಸಂಘದ ವಜ್ರ ಮಹೋತ್ಸವ ಸಮಾರಂಭ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 3:18 IST
Last Updated 25 ನವೆಂಬರ್ 2025, 3:18 IST
ವಿರಾಜಪೇಟೆ ಸಮೀಪದ ಕಾಕೋಟುಪರಂಬುವಿನ ಕೈಲ್ ಮುಹೂರ್ತ ಸಂಘದ ವಜ್ರ ಮಹೋತ್ಸವದ ಸಮಾರೋಪ ಸಮಾರಂಭಕ್ಕೆ ಬೆಂಗಳೂರಿನ ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ಅವರು ಚಾಲನೆ ನೀಡಿದರು.
ವಿರಾಜಪೇಟೆ ಸಮೀಪದ ಕಾಕೋಟುಪರಂಬುವಿನ ಕೈಲ್ ಮುಹೂರ್ತ ಸಂಘದ ವಜ್ರ ಮಹೋತ್ಸವದ ಸಮಾರೋಪ ಸಮಾರಂಭಕ್ಕೆ ಬೆಂಗಳೂರಿನ ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ಅವರು ಚಾಲನೆ ನೀಡಿದರು.   

ವಿರಾಜಪೇಟೆ: ಕೃಷಿಯಲ್ಲಿ ಬದುಕು ಕಟ್ಟಿಕೊಂಡು ಜೀವನ ಸಾಗಿಸುತಿದ್ದ ಹಲವು ಮಂದಿ ಇಂದು ಕಷ್ಟ ಎಂದು ಭಾವಿಸಿ ಕೃಷಿ ಭೂಮಿಯನ್ನು ಮಾರಾಟ ಮಾಡುತ್ತಿರುವುದು ಕಳವಳಕಾರಿ ಸಂಗತಿ ಎಂದು ಬೆಂಗಳೂರಿನ ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ಬೇಸರ ವ್ಯಕ್ತಪಡಿಸಿದರು.

ಸಮೀಪದ ಕಾಕೋಟುಪರಂಬುವಿನ ಕೈಲ್ ಮುಹೂರ್ತ ಸಂಘದ ವಜ್ರ ಮಹೋತ್ಸವ ಅಂಗವಾಗಿ ಈಚೆಗೆ ನಡೆದ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೊಡವ ಜನಾಂಗವು ಸಂಖ್ಯೆಯಲ್ಲಿ ಕಡಿಮೆ ಇದ್ದರೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿ ಉನ್ನತ ಸ್ಥಾನಮಾನಗಳನ್ನು ಅಲಂಕರಿಸಿದ ಸಾಕಷ್ಟು ಮಂದಿಯಿದ್ದಾರೆ. ಸ್ವಉದ್ಯೋಗ ರೂಪಿಸಿಕೊಂಡ ಸ್ವಾವಲಂಬಿ ಜೀವನ ಸಾಗಿಸುವತ್ತ ಜನಾಂಗ ಮುಂದಾಗಬೇಕು ಎಂದರು.

ADVERTISEMENT

ಕರ್ನಾಟಕ ಸರ್ಕಾರ ಚೀಫ್ ಎಲೆಕ್ಟ್ರಿಕಲ್ ಇನ್‌ಸ್ಪೆಕ್ಟರ್ ತೀತಿರ ರೋಶನ್ ಅಪ್ಪಚ್ಚು ಮಾತನಾಡಿ, ‘ಸಾಧನೆಗೆ ಗುರಿ ಮತ್ತು ಛಲ ಮುಖ್ಯ. ಗ್ರಾಮೀಣ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಶಾಶ್ವತ ಉಳಿಸಲು ಪ್ರಯತ್ನ ಸಾಗಬೇಕು’ ಎಂದರು.

ನೆಕ್ಟರ್ ಫ್ರೇಶ್ ಮತ್ತು ವೀರವ್ರತಂ ಫೌಂಡೇಶನ್ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಕುಪ್ಪಂಡ ಛಾಯ ನಂಜಪ್ಪ ಮಾತನಾಡಿ, ‘ಗ್ರಾಮಗಳಲ್ಲಿ ಒಗ್ಗಟ್ಟು ನೆಲೆಗೊಳ್ಳಬೇಕಾದರೆ ರಾಜಕೀಯವನ್ನು ಬದಿಗೊತ್ತಬೇಕು. ದೇಶದ ಯಾವುದೇ ಭಾಗ ಹಾಗೂ ವಿದೇಶದಲ್ಲಿ ನೆಲೆಕಂಡರೂ ನಾಡಿನ, ಜನಾಂಗದ ಆಚಾರ ವಿಚಾರ ಮತ್ತು ಸಂಸ್ಕೃತಿಯನ್ನು ಮರೆತು ಜೀವಿಸಬೇಡಿ. ಧರ್ಮವನ್ನು ನಾವು ಕಾಪಾಡಿದಲ್ಲಿ ಧರ್ಮ ನಮ್ಮನ್ನು ಕಾಪಾಡುತ್ತದೆ ಎಂಬುದನ್ನು ಮನಗಾಣಬೇಕು’ ಎಂದರು.

ಕೈಲ್ ಮುಹೂರ್ತ ಸಂಘ ಕಾಕೋಟುಪರಂಬುವಿನ ವಜ್ರ ಮಹೋತ್ಸವ ಆಚರಣಾ ಸಮಿತಿಯ ಅಧ್ಯಕ್ಷ ಮಂಡೇಟಿರ ಎಂ.ಸುರೇಶ್ ಅಧ್ಯಕ್ಷತೆ ವಹಿಸಿದ್ದರು.

ಕೊಡವ ಸಮಾಜ ಬೆಂಗಳೂರು ಅಧ್ಯಕ್ಷ ಚಿರಿಯಪಂಡ ಸುರೇಶ್, ಕರ್ನಾಟಕ ಸರ್ಕಾರ ಚೀಫ್ ಎಲೆಕ್ಟ್ರಿಕಲ್ ಇನ್‌ಸ್ಪೆಕ್ಟರ್ ತೀತಿರ ರೋಶನ್ ಅಪ್ಪಚ್ಚು, ನೆಕ್ಟರ್ ಫ್ರೇಶ್ ಮತ್ತು ವೀರವ್ರತಂ ಫೌಂಡೇಶನ್ ಸಂಸ್ಥಾಪಕ ಕುಪ್ಪಂಡ ಛಾಯ ನಂಜಪ್ಪ ರಾಜಪ್ಪ ಹಾಗೂ ಸಂಘದ ಮಾಜಿ ಅಧ್ಯಕ್ಷರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕ್ಯಾ. ಬಿದ್ದಂಡ ನಾಣಿ ದೇವಯ್ಯ, ಕಬ್ಬಚೀರ ರಶ್ಮಿ ಕಾರ್ಯಪ್ಪ ಉಪಸ್ಥಿತರಿದ್ದರು. ವಜ್ರ ಮಹೋತ್ಸವ ಆಚರಣಾ ಸಮಿತಿಯ ಗೌರವ ಕಾರ್ಯದರ್ಶಿ ಅಪ್ಪಚಂಗಡ ಪ್ರಕಾಶ್ ಪೂಣಚ್ಚ, ಮಾಳೇಟಿರ ಶ್ರೀನಿವಾಸ್ ಹಾಗೂ  ಗ್ರಾಮಸ್ಥರು ಹಾಜರಿದ್ದರು.

ಪುರುಷರ ವಿಭಾಗದಲ್ಲಿ ಟೀಮ್ ನಾಲ್ಕೇರಿ ತಂಡವು ಪ್ರಶಸ್ತಿ ಪಡೆದುಕೊಂಡಿತು
ವಿರಾಜಪೇಟೆ ಸಮೀಪದ ಕಾಕೋಟುಪರಂಬುವಿನ ಕೈಲ್ ಮುಹೂರ್ತ ಸಂಘದ ವಜ್ರ ಮಹೋತ್ಸವ ಅಂಗವಾಗಿ ನಡೆದ ಹಗ್ಗಜಗ್ಗಾಟ ಸ್ವರ್ಧೆಯ ಮಹಿಳೆಯರ ವಿಭಾಗದಲ್ಲಿ ಮೈತಾಡಿ ಗ್ರಾಮದ ತಂಡ ಪ್ರಶಸ್ತಿ ಪಡೆದುಕೊಂಡಿತು

ವಿವಿಧ ಸ್ಪರ್ಧೆ

ಸಂಘದ ವಜ್ರ ಮಹೋತ್ಸವ ಅಂಗವಾಗಿ ನಡೆದ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಹಗ್ಗಜಗ್ಗಾಟ ಸ್ಪರ್ಧೆಗಳು ಸ್ಲೋ ಬೈಕ್ ರೇಸ್ ಥ್ರೋಬಾಲ್ ಪ್ರಾಥಮಿಕ ಶಾಲಾ ಪ್ರೌಢಶಾಲಾ ಮತ್ತು ಕಾಲೇಜು ವಿಭಾಗದ ಬಾಲಕ ಬಾಲಕಿಯರ ಓಟದ ಸ್ವರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಹಗ್ಗಜಗ್ಗಾಟ ಸ್ವರ್ಧೆಯ ಮಹಿಳೆಯರ ವಿಭಾಗದಲ್ಲಿ ಮೈತಾಡಿ ಗ್ರಾಮದ ತಂಡ ಹಾಗೂ ಪುರುಷರ ವಿಭಾಗದಲ್ಲಿ ಟೀಮ್ ನಾಲ್ಕೇರಿ ತಂಡವು ಪ್ರಶಸ್ತಿಯನ್ನು ಪಡೆದುಕೊಂಡಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.